ಕರ್ನಾಟಕಪ್ರಮುಖ ಸುದ್ದಿ

ತಮಿಳುನಾಡಲ್ಲಿ ಕನ್ನಡ ಚಿತ್ರಪ್ರದರ್ಶನ ನಿಂತಿಲ್ಲ : ಡಿಐಜಿ ಸ್ಪಷ್ಟನೆ: ಬಾಹುಬಲಿ2 ಬಿಡುಗಡೆಗಿಲ್ಲ ಅಡ್ಡಿ

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನು ರದ್ದು ಮಾಡಲಾಗಿದೆ ಎಂಬ ವದಂತಿ ಎಲ್ಲೆಡೆ ಹರಿದಾಡಿತ್ತು.ಆದರೆ ಆ ರೀತಿ ಏನೂ ನಡೆದಿಲ್ಲ ಎಂದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಇದೀಗ ಬೆಂಗಳೂರು  ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನಗಳನ್ನು ರದ್ದುಪಡಿಸಿಲ್ಲವೆಂದು ಅಲ್ಲಿ ಡಿಜಿಪಿಯವರು ದೃಢಪಡಿಸಿದ್ದಾರೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಏತನ್ಮಧ್ಯೆ ಕಟ್ಟಪ್ಪ ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಕೊನೆಗೂ ವಿಷಾದ ವ್ಯಕ್ತಪಡಿಸಿದ್ದು ನಟ ಕಮಲಹಾಸನ್ ಟ್ವೀಟ್ ಮೂಲಕ ಸತ್ಯರಾಜುಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಮಸ್ಯೆಗೊಳಗಾಗಿರುವ ವಾತಾವರಣದಲ್ಲಿ ತರ್ಕಬದ್ಧತೆ ಕಾಪಾಡಿಕೊಂಡಿರಿ ಎಂದು ಧನ್ಯವಾದ ತಿಳಿಸಿದ್ದಾರೆ. ಕನ್ನಡಪರ ಸಂಘಟನೆಯ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರು ಬಂದ್ ಕರೆಯನ್ನು ಹಿಂದೆಗೆದುಕೊಂಡಿದ್ದಾರೆ.

ಇದೀಗ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ಗೆ ನೀಡಿದ್ದ ಕರೆಯನ್ನು ಹಿಂದೆಗೆದುಕೊಂಡಿದ್ದು ಪ್ರಕರಣ ಸುಖಾಂತ್ಯ ಕಂಡಿದೆ (ಎಸ್.ಎನ್)

Leave a Reply

comments

Related Articles

error: