ಮೈಸೂರು

ಸರಳ ವಿವಾಹ

ಮೈಸೂರು,ಏ.19:-  ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಡೆಸುತ್ತಿರುವ ಆಶಾ ಭವನದ ಹೆಣ್ಣು ಮಕ್ಕಳ ತಂಗುದಾಣದಲ್ಲಿರುವ ಲಕ್ಷ್ಮಿ ಹಾಗೂ ಜಿನ್ನಹಳ್ಳಿ ಗ್ರಾಮದ ವಾಸಿ ಮಂಜುನಾಥ ಜೋಡಿ ಭಾನುವಾರ ಸರಳ ವಿವಾಹವಾಯಿತು.

ನಗರದ ಬನ್ನಿಮಂಟಪ ಬಸ್‌ ಡಿಪೊ ಬಳಿಯ ಮಂಜುನಾಥಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಮಾಂಗಲ್ಯ ಧಾರಣೆ ಮಾಡಲಾಯಿತು. ನಂತರ ಹೋಟೆಲ್ ಗೋವರ್ಧನ್‌ನಲ್ಲಿ ಆರತಕ್ಷತೆ ನೆರವೇರಿತು.

ಈ ಸರಳ ವಿವಾಹದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟ, ಧ್ವನಿ ಮಹಿಳಾ ಒಕ್ಕೂಟದ, ಮುಖ್ಯಸ್ಥರು ಹಾಗೂ ಕುಟುಂಬದ ಹಿರಿಯರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: