ಮೈಸೂರು

ಕೋವಿಡ್ -19 ಹೆಚ್ಚಳ ಹಿನ್ನೆಲೆ : ಏ.23ರಿಂದ ಮೈಸೂರು ಜಿಲ್ಲೆಯಲ್ಲಿ ಚಿತ್ರಮಂದಿರಗಳು ಬಂದ್

ಮೈಸೂರು,ಏ.19:- ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆಯು ಅತ್ಯಂತ ವೇಗವಾಗಿ ಹರಡುತ್ತಿದ್ದು, ಆತಂಕ ಸೃಷ್ಟಿಸಿದೆ. ಇದರಿಂದ ಚಿತ್ರ ಮಂದಿರದ ಮಾಲೀಕರುಗಳು ಏ.23ರಿಂದ ಚಿತ್ರಮಂದಿರಗಳನ್ನು ತೆರೆಯದಿರಲು ನಿರ್ಧರಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು  ಕೊರೋನಾ ವೈರಸ್ ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಕಡೆಗೆ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವಲ್ಲಿ ಒಂದು ಸಣ್ಣ ಹೆಜ್ಜೆಯಾಗಿ. ಕೋವಿಡ್ -19 ರ ವಿರುದ್ಧ ನಮ್ಮ ಕಾರ್ಮಿಕರು ಮತ್ತು ಪ್ರೇಕ್ಷಕರ  ಹಿತದೃಷ್ಠಿ ಹಾಗೂ ಸುರಕ್ಷಿತತೆ ಕಾಪಾಡಲು, ಮೈಸೂರು ನಗರ, ನಂಜನಗೂಡು,  ಕೆ ಆರ್ ನಗರ ಮತ್ತು ಇತರ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿನ  ಸಿನೆಮಾ ಚಿತ್ರಮಂದಿರಗಳನ್ನು ಏ.23ರಿಂದ ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: