ಮೈಸೂರು

ಯಾದವಗಿರಿ, ಬಂಬೂಬಜಾರ್ ಕೊಳಚೆ ಪ್ರದೇಶದಲ್ಲಿ 230 ಮನೆಗಳ ನೆಲಸಮ: ನಿವಾಸಿಗಳ ಆಕ್ರೋಶ

ಮೈಸೂರು,ಏ.19-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಜೆಸಿಬಿಗಳು ಘರ್ಜಿಸಿದ್ದು, ಯಾದವಗಿರಿ ಮತ್ತು ಬಂಬೂಬಜಾರ್ ನ ಕೊಳಚೆ ಪ್ರದೇಶಗಳಲ್ಲಿ ನೂರಾರು ಮನೆಗಳನ್ನು ನೆಲಸಮ ಮಾಡಲಾಗಿದೆ.

ರೈಲ್ವೆ ಹಳಿಯ ವಿಸ್ತರಣೆಗಾಗಿ ಯಾದವಗಿರಿಯಲ್ಲಿ 55, ಬಂಬೂ ಬಜಾರ್ ನಲ್ಲಿ 175 ಮನೆಗಳು ಸೇರಿ ಒಟ್ಟು 230 ಮನೆಗಳನ್ನು ಸ್ಲಂ ಬೋರ್ಡ್ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಶಾಸಕ ಎಲ್.ನಾಗೇಂದ್ರ ಅವರ ಸೂಚನೆಯಂತೆ ಸ್ಲಂ ಬೋರ್ಡ್ ನವರು ಪೊಲೀಸ್ ಬಿಗಿ ಭದ್ರತೆಯಲ್ಲಿ ಮನೆಗಳನ್ನು ನೆಲಸಮ ಮಾಡಿದ್ದಾರೆ.

ಬೆಳಿಗ್ಗೆ ಯಾದವಗಿರಿ ಮತ್ತು ಬಂಬೂಬಜಾರ್ ನ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿನ ಜನರನ್ನು ಹೊರಗೆ ಕಳುಹಿಸಿ ನೂರಾರು ಪೊಲೀಸರ ಭದ್ರತೆಯಲ್ಲಿ ಮನೆಗಳನ್ನು ನೆಲಸಮ ಮಾಡುವ ಕಾರ್ಯಾಚರಣೆ ಮಾಡಿದ್ದಾರೆ.

ಇಲ್ಲಿನ ನಿವಾಸಿಗಳಿಗೆ ಹಳೇ ಕೇಸರೆ ಬಳಿ ಸ್ಲಂ ಅಪಾರ್ಟ್ ಮೆಂಟ್ ನಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಆದರೆ ಕಳೆದ 50 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಅಧಿಕಾರಿಗಳು ಏಕಾಏಕಿ ಮನೆ ನೆಲಸಮಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: