ಮೈಸೂರು

ನಕಲಿ ರೆಮ್ಡಿಸಿವಿರ್ ಔಷಧಿ ಮಾರಾಟ ಬೃಹತ್ ಜಾಲ ಪತ್ತೆ : ಮೂವರ ಬಂಧನ ; ಡಾ.ಚಂದ್ರಗುಪ್ತ ಮಾಹಿತಿ

ಮೈಸೂರು,ಏ.19:-  ಮೈಸೂರಿನಲ್ಲಿ ನಕಲಿ ರೆಮ್ಡಿಸಿವಿರ್ ಔಷಧಿ ಮಾರಾಟ ಬೃಹತ್ ಜಾಲ ಪತ್ತೆಯಾಗಿದ್ದು ನಕಲಿ ಔಷಧಿ ಮಾರಾಟಗಾರನನ್ನು ಬಂಧಿಸಲಾಗಿದೆ ಎಂದು ಮೈಸೂರು ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ತಿಳಿಸಿದರು.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಆರೋಪಿಯಿಂದ 2,82,000 ರೂ. ನಗದು ಸೇರಿದಂತೆ ನಕಲಿ ಔಷಧಿ ವಶಕ್ಕೆ ಪಡೆಯಲಾಗಿದೆ. ಸ್ಟಾಪ್ ನರ್ಸ್ ನಿಂದ ಈ ಕೃತ್ಯ ನಡೆದಿದೆ ಎಂದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬಾತ ಹಲವು ತಿಂಗಳಿನಿಂದ ನಕಲಿ ಔಷಾಧಿ ಮಾರಾಟ ಮಾಡುತ್ತಿದ್ದ.   ಬಳಕೆಯಾದ ಬಾಟಲ್ ಗಳ ಬಳಕೆ ಮಾಡುತ್ತಿದ್ದ. ಬಳಕೆಯಾದ ರೆಮ್ಡಿಸಿವಿರ್ ಬಾಟಲಿಗೆ ಸೆಪ್ಟ್ರಿಯಾಕ್ಸೊನ ಎಂಬ ಆ್ಯಂಟಿಬಯೋಟಿಕ್ ಔಷಧ ಹಾಗೂ ನಾರ್ಮಲ್ ಸಲೈನ್ ಬಳಸುತ್ತಿದ್ದ. ಖಾಲಿ ಬಾಟೆಲ್ ಗಳನ್ನ ಶಿವಪ್ಪ ಮಂಗಳ ಎಂಬವರು ಸಪ್ಲೆ ಮಾಡುತ್ತಿದ್ದರು ಎಂದು ತಿಳಿಸಿದರು.
ಈ ಕೃತ್ಯದಲ್ಲಿ ಪ್ರಶಾಂತ್ ಹಾಗೂ ಮಂಜುನಾಥ್ ಎಂಬ ಇಬ್ಬರು ಭಾಗಿಯಾಗಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಾಸ್ಕ್ ಧರಿಸುವುದು ಕಡ್ಡಾಯ
ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದೇ ಓಡಾಡಿದರೆ ದಂಡವನ್ನು ಹಾಕಲಾಗುತ್ತಿದೆ. ಈ ಮಧ್ಯೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪೊಲೀಸರು ಮಾಸ್ಕ್ ಕಾರ್ಯಾಚರಣೆ ನಡೆಸಿದ್ದು ಮಾಸ್ಕ್ ಹಾಕದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದ್ದಾರೆ.
ಮೈಸೂರು ನಗರದಲ್ಲಿ 51,099 ಕೇಸ್ ದಾಖಲಾಗಿದ್ದು, ನಗರದಲ್ಲಿ ಕಳೆದ ಏಳು ತಿಂಗಳಿನಿಂದ 1ಕೋಟಿ 37 ಲಕ್ಷದ 100ರೂ ದಂಡ ವಸೂಲಿ ಮಾಡಲಾಗಿದೆ. ನಿನ್ನೆ ಒಂದೇ ದಿನ 1494 ಕೇಸ್ ದಾಖಲಾಗಿದ್ದು, ಒಂದೇ ದಿನದಲ್ಲಿ 2,49,850 ರೂ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: