ಮೈಸೂರು

ಮ್ಯಾನ್ ಹೋಲ್ ಸ್ವಚ್ಛತೆಗೆ ಪೌರಕಾರ್ಮಿಕರನ್ನು ಬಳಸಿಲ್ಲ : ಸ್ಪಷ್ಟನೆ

ಪೌರ ಕಾರ್ಮಿಕರನ್ನು ಮ್ಯಾನ್ ಹೋಲ್ ಸ್ವಚ್ಚತೆಗೆ ಬಳಸಿಲ್ಲವೆಂದು ಮೈಸೂರು ನಗರಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ಥಳೀಯ ಪತ್ರಿಕೆಯಲ್ಲಿ ಈ ಕುರಿತ ವರದಿ ಪ್ರಕಟವಾಗಿತ್ತು. ಆದರೆ ಇದು ಸತ್ಯಕ್ಕೆ ದೂರವಾದ ಮಾತು.  ಸುಪ್ರೀಂ ಕೋರ್ಟ್ ನ ಆದೇಶವನ್ನು ಪೌರ ಕಾರ್ಮಿಕರು ಸೇರಿದಂತೆ ನಗರಪಾಲಿಕೆಯಿಂದಲೂ ದಕ್ಷತೆಯಿಂದ ಪಾಲಿಸಲಾಗುತ್ತಿದೆ. ಎಲ್ಲಿಯೂ ಕಾನೂನು ಉಲ್ಲಂಘಿಸಿಲ್ಲ ಎಂದ ಅವರು, ಕಳೆದ ಏ.19ರಂದು ಮ್ಯಾನ್ ಹೋಲ್ ಬಳಿ ಕಾರ್ಯನಿರತರಾದ ಕಾರ್ಮಿಕರ ಮೊಬೈಲ್ ಪೋನ್ ಒಳಚರಂಡಿಯಲ್ಲಿ ಬಿದ್ದಿದ್ದು ಅದನ್ನು ತೆಗೆಯಲು ಮಾತ್ರ ಇನ್ನಿಬ್ಬರ ಸಹಾಯದಿಂದ ಪೌರ ಕಾರ್ಮಿಕನೋರ್ವ ಇಳಿದಿದ್ದಾನೆ. ಇದರ ಹೊರತಾಗಿ ಯಾವುದೇ ಸ್ವಚ್ಛತೆಯನ್ನು ನಡೆಸಿಲ್ಲವೆಂದ ಅವರು, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನಾಧರಿಸಿ ಸಭೆ ನಡೆಸಿ ಪೌರ ಕಾರ್ಮಿಕರಿಗೆ ಎಚ್ಚರಿಕೆಯನ್ನು ನೀಡಲಾಗಿದ್ದು ಬರಿ ಕೈನಲ್ಲಿ ಯಾವುದೇ ಕಾರಣಕ್ಕೂ ಸ್ವಚ್ಛತೆಯನ್ನು ಕೈಗೊಳ್ಳದಂತೆ ತಿಳಿ ಹೇಳಲಾಗಿದೆ. ಅಲ್ಲದೇ ಮಹಾನಗರ ಪಾಲಿಕೆಯಿಂದ ಸ್ವಚ್ಛತೆಗಾಗಿ ಹಲವಾರು ಯಂತ್ರೋಪಕರಣಗಳನ್ನು ಬಳಸಲಾಗುತ್ತಿದ್ದು ಕಾರ್ಮಿಕರನ್ನು ಎಲ್ಲಿಯೂ ಬಳಸಿಲ್ಲವೆಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ  ನಗರಾಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಪಳನಿ ಹಾಗೂ ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರಾದ ಮಲ್ಲೇಶ್, ಕೀರ್ತಿ ಹಾಗೂ ಕೊಲ್ಲಪ್ಪ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: