ದೇಶಪ್ರಮುಖ ಸುದ್ದಿವಿದೇಶ

ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಸೋಂಕು :  ಭಾರತಕ್ಕೆ ಪ್ರಯಾಣಿಸದಂತೆ   ತನ್ನ ನಾಗರಿಕರಿಗೆ ಸೂಚನೆ ನೀಡಿದ ಯುಎಸ್   

ವಿದೇಶ(ವಾಷಿಂಗ್ಟನ್)ಏ.20:-  ಭಾರತದಲ್ಲಿ ಕೊರೋನಾ ಸಾಂಕ್ರಾಮಿಕವು   ಅಸಾಧಾರಣ ರೂಪವನ್ನು ಪಡೆದುಕೊಂಡಿದೆ. ಕೊರೋನಾದ ಎರಡನೇ ಅಲೆಯು ಎಷ್ಟು ಭಯಾನಕವಾಗಿದೆಯೆಂದರೆ ಅದು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ನಿನ್ನೆ, ಭಾರತದಲ್ಲಿ 2,73,810 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ, ಇದು ಇಲ್ಲಿಯವರೆಗಿನ ಅತಿದೊಡ್ಡ ಅಂಕಿ ಅಂಶವಾಗಿದೆ, ದೇಶದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ಈಗ 1.5 ಕೋಟಿ ದಾಟಿದೆ. ಈ ಕೊರೋನಾದಿಂದ 1,619 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊರೋನಾ ಏಕಾಏಕಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಈಗ ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ದೊಡ್ಡ ದೇಶಗಳು ಭಾರತದ ವಿಷಯದಲ್ಲಿ ಕಠಿಣ ಹೆಜ್ಜೆಗಳನ್ನು ಇರಿಸಿವೆ.

ಬ್ರಿಟನ್ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿದೆ.  ಈಗ ಅಮೆರಿಕ ಕೂಡ ತನ್ನ ನಾಗರಿಕರನ್ನು ಭಾರತಕ್ಕೆ ಪ್ರಯಾಣಿಸದಂತೆ ಸೂಚನೆ ನೀಡಿದೆ.  ಭಾರತದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿದೆ ಎಂದು ಅಮೆರಿಕ ಹೇಳಿದೆ, ಅಮೇರಿಕ ತನ್ನ ನಾಗರಿಕರ ಕುರಿತು ಚಿಂತೆ ಮಾಡುತ್ತಿದ್ದು,   ಈ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಅವರಿಗೆ ಮನವಿ ಮಾಡುತ್ತಿದೆ.

ಈ ಮೊದಲು  ಬ್ರಿಟನ್ ಭಾರತವನ್ನು   ‘ರೆಡ್ ಲಿಸ್ಟ್’ಗೆ ಸೇರಿಸಿದೆ, ಇದರ ಅಡಿಯಲ್ಲಿ ಬ್ರಿಟನ್ ಅಲ್ಲದ, ಐರಿಶ್ ನಾಗರಿಕರನ್ನು ಯುಕೆ ಗೆ ನಿಷೇಧಿಸಲಾಗಿದೆ. ಅಲ್ಲದೆ ವಿದೇಶದಿಂದ ಹಿಂದಿರುಗಿದ ಬ್ರಿಟನ್ನರು ಹೋಟೆಲ್‌ನಲ್ಲಿ 10 ದಿನಗಳ ಕಾಲ ಸಂಪರ್ಕತಡೆಯನ್ನು ಹೊಂದುವುದು ಕಡ್ಡಾಯವಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: