ಮೈಸೂರು

ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗೆ ಕ್ರಿಮಿನಾಶಕ ಬೆರೆಸಿದ  ದುಷ್ಕರ್ಮಿಗಳು

ಮೈಸೂರು,ಏ.20:-   ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗೆ  ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ   ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಟ್ಯಾಂಕ್ ನಿಂದ ನಲ್ಲಿಗಳಿಗೆ ನೀರು ಬಿಟ್ಟಾಗ ವಾಸನೆ ಹೊರಬಂದ ಕಾರಣ  ಘಟನೆ ಬೆಳಕಿಗೆ  ಬಂದಿದೆ. ಗ್ರಾಮಸ್ಥರು ಅದೃಷ್ಟವಶಾತ್ ವಾಸನೆ ಇದ್ದ ಕಾರಣ ನೀರನ್ನು ಬಳಕೆ  ಮಾಡದೇ ಇರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಏತನ್ಮಧ್ಯೆ ನೀರು ಸೇವಿಸಿರುವ ಗ್ರಾಮದ ಸಾಕುಪ್ರಾಣಿಗಳು ಅಸ್ವಸ್ಥವಾಗಿದ್ದು, ಕ್ರಿಮಿನಾಶಕ ಬೆರಸಿದ ಪರಿಣಾಮ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರ ತಿಳಿದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್  ಮತ್ತು ನಂಜನಗೂಡಿನ ಡಿವೈಎಸ್ಪಿ ಗೋವಿಂದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ.

ಟ್ಯಾಂಕ್ ನೀರಿಗೆ ಭತ್ತದ ಗದ್ದೆಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿ ಬೆರೆಸಿರುವ ಶಂಕೆ ವ್ಯಕ್ತವಾಗಿದೆ.   ಟ್ಯಾಂಕರ್ ಮೂಲಕ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮವನ್ನೇ ಸ್ಮಶಾನ ಮಾಡಲು ಹೊರಟಿದ್ದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: