ಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟಿ ಸಮೀರಾ ರೆಡ್ಡಿ ಯವರ ಎರಡೂ ಮಕ್ಕಳಿಗೂ ಕೊರೋನಾ ಸೋಂಕು

ದೇಶ(ಮುಂಬೈ)ಏ.20:- ಕೊರೋನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಅನೇಕ ಮಕ್ಕಳು ಸೋಂಕಿಗೆ ಒಳಗಾಗುತ್ತಿದ್ದಾರೆ.

ಬಾಲಿವುಡ್ ನಟಿ ಸಮೀರಾ ರೆಡ್ಡಿ ಅವರ   ಇಬ್ಬರೂ ಮಕ್ಕಳಿಗೂ ಕೊರೋನಾ ವೈರಸ್ ಸೋಂಕು ತಗುಲಿದೆ.   ಇಬ್ಬರ ಆರೋಗ್ಯದ ಕುರಿತು   ಸಮೀರಾ ರೆಡ್ಡಿ ಇನ್‌ ಸ್ಟಾಗ್ರಾಮ್‌ಗೆ  ಮೂಲಕ ಮಾಹಿತಿ ನೀಡಿದ್ದಾರೆ.   5 ವರ್ಷದ ಮಗು ಹಂಸ,     2 ವರ್ಷದ ನಾಯರಾಗೆ ಕೊರೋನಾ ಸೋಂಕು ತಗುಲಿದೆ.  ಇವರಿಬ್ಬರಿಗೂ ಪಾಸಿಟಿವ್ ಬಂದ ನಂತರ ಪತಿ, ನಟ    ಅಕ್ಷಯ್ ವರ್ದೆ ಅವರಲ್ಲಿ ಕೂಡ ರೋಗ ಲಕ್ಷಣ ಕಂಡು ಬಂದಿದೆ ಎನ್ನಲಾಗಿದ್ದು,   ಪ್ರಸ್ತುತ  ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ.

ಮೊದಲಿಗೆ ಭಯಪಡುವುದು ಕಷ್ಟವೇನಲ್ಲ, ಆದರೆ ಸಮಯದ ಅಗತ್ಯವೆಂದರೆ ಶಕ್ತಿಯನ್ನು ಸಂಗ್ರಹಿಸಿ ‘ಸ್ಮಾರ್ಟ್’ ಆಗಿರಬೇಕು ಎಂದು ಸಮೀರಾ ಹೇಳಿದ್ದಾರೆ.  ಅನೇಕ ಜನರು ಹಂಸ ಮತ್ತು ನಾಯರಾ ಬಗ್ಗೆ ಕೇಳುತ್ತಿದ್ದಾರೆ, ಆದ್ದರಿಂದ ನಾನು  ಅಪ್ ಡೇಟ್ ನೀಡುತ್ತಿದ್ದೇನೆ ಎಂದಿದ್ದಾರೆ.

ಕಳೆದ ವಾರ, ಹಂಸಗೆ  ತೀವ್ರ ಜ್ವರ, ತಲೆನೋವು, ಮೈಕೈನೋವು ಹೊಟ್ಟೆಯ ಅಸ್ವಸ್ಥತೆ ಮತ್ತು ತೀವ್ರ ಆಯಾಸ ಇತ್ತು. ಇದು ಸುಮಾರು ನಾಲ್ಕು ದಿನಗಳವರೆಗೆ ಉಳಿದಿತ್ತು.   ತುಂಬಾ ಅಸಾಮಾನ್ಯವಾಗಿತ್ತು. ಆದ್ದರಿಂದ ನಾವು ಕೊರೋನಾ ಪರೀ ಕ್ಷೆಗೆ ಒಳಪಡಿಸಿದೆವು.  ಅವರ ವರದಿಯು ಪಾಸಿಟಿವ್ ಬಂತು.   ನಾನು ಆರಂಭದಲ್ಲಿ ಹೆದರುತ್ತಿದ್ದೆ ಎಂಬುದನ್ನು ಒಪ್ಪಿಕೊಳ್ಳಬೇಕು ಏಕೆಂದರೆ ನಾವು ಸಿದ್ಧರಾಗಿರುತ್ತೇವೆ  ಎಂದು ಭಾವಿಸುತ್ತೇವೆ. ಆದರೆ ನಾವು ಭಾವಿಸುವಷ್ಟು ಸಂಪೂರ್ಣವಾಗಿ ಸಿಧ್ಧರಾಗಿರುವುದಿಲ್ಲ ಎಂದಿದ್ದಾರೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: