ಕ್ರೀಡೆದೇಶಪ್ರಮುಖ ಸುದ್ದಿ

ಕೊರೋನಾ ಹೆಚ್ಚಳ ಹಿನ್ನೆಲೆ : ಇಂಡಿಯಾ ಓಪನ್ ಪಂದ್ಯಾವಳಿ ಮುಂದೂಡಿಕೆ

ದೇಶ(ನವದೆಹಲಿ),ಏ.20:-  ರಾಜಧಾನಿಯಲ್ಲಿ   ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಬಿಎಐ) ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಘಾನಿಯಾ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.   “ದೆಹಲಿಯಲ್ಲಿ ಏ.19ರ ರಾತ್ರಿಯಿಂದ ಏಪ್ರಿಲ್ 26 ರವರೆಗೆ ಲಾಕ್ ಡೌನ್ ಇದೆ ಎಂದು ನಿಮಗೆಲ್ಲರಿಗೂ ತಿಳಿದಿದೆ.  ಮುಂದಿನ ಪರಿಸ್ಥಿತಿ ಏನೆಂದು ನಮಗೆ ತಿಳಿದಿಲ್ಲ. ಇದು ಗಂಭೀರ ಪರಿಸ್ಥಿತಿ ಮತ್ತು ಎಲ್ಲಾ ಪಾಲುದಾರರೊಂದಿಗೆ ಮಾತನಾಡಿದ ನಂತರ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಪಂದ್ಯಾವಳಿಯನ್ನು ನಡೆಸುವುದು ಸರಿಯಲ್ಲ ಎಂದು ಒಮ್ಮತದ ಅಭಿಪ್ರಾಯ ಬಂದಿದೆ ಎಂದಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಸಹ ಸೋಮವಾರ ಹೇಳಿಕೆ ನೀಡಿ   ಮೇ 11 ರಿಂದ 16 ರವರೆಗೆ ನಡೆಯಲಿರುವ ಇಂಡಿಯಾ ಓಪನ್ 2021 ಅನ್ನು ಮುಂದೂಡಲಾಗಿದೆ ಎಂದು ಹೇಳಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: