ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನಟಿ ಸಂಜನಾ ಗಲ್ರಾನಿ ಮತ್ತವರ ಪತಿಗೆ ಕೊರೊನಾ ಪಾಸಿಟಿವ್

ಬೆಂಗಳೂರು,ಏ.20-ನಟಿ ಸಂಜನಾ ಗಲ್ರಾನಿ ಹಾಗೂ ಅವರ ಪತಿ ಅಜೀಜ್ ಪಾಷ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಆಗಿದೆ. ನನಗೆ ನನ್ನ ಪತಿಯಿಂದಲೇ ಕೊರೊನಾ ಸೋಂಕು ಆಗಿದೆ. ನನ್ನ ಪತಿ ವೈದ್ಯರಾಗಿದ್ದು ಪ್ರತಿ ದಿನ ಅವರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಬಲವಾದ ಕೊರೊನಾ ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ ಸಂಜನಾ.

ಸಂಜನಾ ಗಲ್ರಾನಿ ನಿನ್ನೆಯಷ್ಟೆ ಪತಿಯ ಕುಟುಂಬದೊಂದಿಗೆ ಡಿನ್ನರ್ ಪಾರ್ಟಿ ಮಾಡಿದ್ದರು. ಇಂದು ಸಂಜನಾಗೆ ಪಾಸಿಟಿವ್ ಆಗಿದ್ದು ಸಂಜನಾ ಅವರ ಪತಿಯ ಕುಟುಂಬದವರಿಗೂ ಆತಂಕ ಎದುರಾಗಿದೆ.

ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದರು. ನಟಿ ರಾಗಿಣಿ ದ್ವಿವೇದಿ ಸಹ ಇದೇ ಪ್ರಕರಣದಲ್ಲಿ ಸಿಲುಕಿಕೊಂಡು ಸಂಜನಾ ಜೊತೆಗೆ ಜೈಲು ವಾಸ ಅನುಭವಿಸಿದರು. (ಎಂ.ಎನ್)

 

Leave a Reply

comments

Related Articles

error: