ಮೈಸೂರು

ರಾಜ್ಯಾದ್ಯಂತ ಡಾ.ರಾಜ್ ಜನ್ಮದಿನ ಸರ್ಕಾರದ ಮಟ್ಟದಲ್ಲಿ ಆಚರಿಸಲು : ಆರ್.ರಘು ಒತ್ತಾಯ

ಕನ್ನಡಿಗರ ಹೆಮ್ಮೆಯ ಪ್ರತೀಕ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜನ್ಮದಿನಾಚರಣೆಯನ್ನು ಮೈಸೂರಿನ ರಾಜಭೂಷಣ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಶಿವ ಸೈನ್ಯದಿಂದ ಇದೇ ಏಪ್ರಿಲ್ 24ರಂದು ಬೆಳಿಗ್ಗೆ 11ಕ್ಕೆ  ಡಾ.ರಾಜ್ ಕುಮಾರ್ ಉದ್ಯಾವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ರಘು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋಟೆ ಆಂಜನೇಯ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಉದ್ಯಾನವನ್ನು ಪ್ರವೇಶಿಸಿಲಾಗುವುದು. ಜನ್ಮದಿನಾಚರಣೆಯಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ತಿಳಿಸಿ,  ಸರ್ಕಾರ ಕೇವಲ ಮತ ಬ್ಯಾಂಕ್ ಗಾಗಿ ನಡೆಸುವ ಜಯಂತಿಗಳನ್ನು ಬಿಡಬೇಕು ಎಂದ ಅವರು,12ನೇ ಶತಮಾನದ ಬಸವಾದಿ ಪ್ರಮಥರ ಸಾಮಾಜಿಕ ಕ್ರಾಂತಿಯಂತೆ ಡಾ.ರಾಜ್ ತಮ್ಮ ಚಲನಚಿತ್ರಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಿದ್ದಾರೆ. ಜಾತಿ ಧರ್ಮ ಮೀರಿದ ಏಕೈಕ ವ್ಯಕ್ತಿ ಡಾ.ರಾಜ್ ಅವರ ಜಯಂತಿಯನ್ನು ಸರ್ಕಾರ  ಸಾಂಕೇತಿಕವಾಗಿ ಆಚರಿಸದೆ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಡೆಸಬೇಕೆಂದು ಒತ್ತಾಯಿಸಿ, ಮೈಸೂರಿನಲ್ಲಿ ಅವರ ಮ್ಯೂಸಿಯಂ ಸ್ಥಾಪಿಸಬೇಕು, ಡಾ.ರಾಜ್ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ, ನಗರದ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿ ವಾರಕೊಮ್ಮೆಯಾದರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಚಲನಚಿತ್ರ ನಟ ಸೋಮಣ್ಣ, ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಶಿವಸೈನ್ಯದ ಅಧ್ಯಕ್ಷ ಬಿ.ಎಸ್.ರವಿ, ಬಾಲಾಜಿ ಶೇಖರ್, ರವಿ, ಮಹೇಶ್, ಜಗದೀಶ್, ಧರ್ಮ, ಗುರು ಸೇರಿದಂತೆ ಸಂಘದ ಕಾರ್ಯಕರ್ತರು  ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: