ಮೈಸೂರು

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ : ಬಿರುಸುಗೊಂಡ ಪೊಲೀಸರ ಮಾಸ್ಕ್ ಕಾರ್ಯಾಚರಣೆ

ಮೈಸೂರು,ಏ.20:-  ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಲ್ಲಿ  ಮಾಸ್ಕ್ ಕಾರ್ಯಾಚರಣೆ ಬಿರುಸುಗೊಂಡಿದೆ.  ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ   ನಗರ ಪೊಲೀಸರು ರಸ್ತೆಗಿಳಿದಿದ್ದು,  ನಗರದ ಪ್ರತಿ ರಸ್ತೆಯಲ್ಲೂ  ತಪಾಸಣೆ ನಡೆಸುತ್ತಿದ್ದಾರೆ.

ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ 250ರೂ. ದಂಡ ವಿಧಿಸುತ್ತಿದ್ದು, ದಂಡವಿಚಾರಕ್ಕೆ ಸಾರ್ವಜನಿಕರು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮಾಸ್ಕ್ ಹಾಕಿದ್ರೆ ಉಸಿರಾಟಕ್ಕೆ ತೊಂದರೆಯಾಗತ್ತೆ, ನಾನು ದಂಡ ಕಟ್ಟಲ್ಲ, ದಂಡ ಕಟ್ಟಿದ್ರೆ ಕೊರೋನಾ ಹೋಗುತ್ತಾ? ಏನು ತಿಳಿಯದ ಜನರತ್ರ ದಂಡ ವಸೂಲಿ ಮಾಡ್ತೀರಾ ಎಂದು ಮಾಸ್ಕ್ ಧರಿಸದ ಸಾರ್ವಜನಿಕರು ಪೊಲೀಸರನ್ನೇ ಪ್ರಶ್ನಿಸುತ್ತಿದ್ದು, ಪೊಲೀಸರ ಹಾಗೂ ಮಾಸ್ಕ್ ಧರಿಸದ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: