ಕರ್ನಾಟಕಪ್ರಮುಖ ಸುದ್ದಿ

ಮಾಸ್ಕ್ ಹಾಕದವರಿಗೆ ಮಂಡ್ಯದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ದಂಡ ಹಾಕಿ ಎಚ್ಚರಿಕೆ

ರಾಜ್ಯ(ಮಂಡ್ಯ),ಏ.20:-  ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಹಾಕದವರಿಗೆ ಮಂಡ್ಯದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.

ನಗರದ ವಿ.ವಿ ರಸ್ತೆಯಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ದಿಢೀರ್ ಭೇಟಿ ನೀಡಿ ಮಾಸ್ಕ್ ಹಾಕದವರಿಗೆ ತಲಾ 500 ರೂಪಾಯಿಗಳಂತೆ ದಂಡ ವಿಧಿಸಲಾಯಿತು. ಕೊರೊನಾ 2ನೇ ಅಲೆ ಹೆಚ್ಚಾದ ಹಿನ್ನಲೆ ಮಾಸ್ಕ್ ಧರಿಸದೆ ಓಡಾಡುವವರಿಗೆ ಬಿಸಿ ಮುಟ್ಟಿಸಿದರು.
ನಗರದ ವಿ.ವಿ ರಸ್ತೆ ಸುತ್ತಿ ಮಾಸ್ಕ್ ಧರಿಸಿ ಓಡಾಡುವಂತೆ ಎಚ್ಚರಿಕೆ ಕೊಟ್ಟು ಎಲ್ಲಾ ಅಂಗಡಿ, ಹೋಟೆಲ್‍ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಜನರಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ  ಕೇಳದ ಹಿನ್ನಲೆ ನಗರ ಸಭೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ರಸ್ತೆಗಿಳಿದರು. ಮಂಡ್ಯದಲ್ಲಿ ದಿನೇದಿನೇ ಕೇಸ್ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತರಾಗಬೇಕು ಎಂದು ಮನವಿ ಮಾಡಿದರು. ಕೊರೊನಾ ಇನ್ನೂ ನಮ್ಮನ್ನ ಬಿಟ್ಟು ಹೋಗಿಲ್ಲ. ನಮ್ಮ ಮಂಡ್ಯದಲ್ಲಿ ಒಂದೂ ಪ್ರಕರಣವಿಲ್ಲದಂತೆ ಝೀರೋ ಆಗುವವರೆಗೂ ಈ ದಂಡ ಹಾಕುವ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿದರು.

ಆದ್ದರಿಂದ ಮಾಸ್ಕ್ ಧರಿಸಿ ಎಚ್ಚರಿಕೆಯಿಂದ ಇರಿ ಎಂದು ಬೈಕ್ ನಲ್ಲಿ, ಹೋಟೆಲ್ ಗಳಲ್ಲಿ ಮಾಸ್ಕ್ ಇಲ್ಲದೆ ಓಡಾಡೋರಿಗೆ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ನಗರಸಭಾ ಆಯುಕ್ತರಾದ ಲೋಕೇಶ್, ವಾರ್ತಾಧಿಕಾರಿ ಟಿ.ಕೆ ಹರೀಶ್ ,ನಗರಸಭೆಯ ಸಿಬ್ಬಂದಿಗಳು ಮತ್ತಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: