ದೇಶಪ್ರಮುಖ ಸುದ್ದಿವಿದೇಶ

ಮಹಾಕುಂಭದಿಂದ ಹಿಂದಿರುಗಿದ ನಂತರ ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಶಾ ಮತ್ತವರ ಪತ್ನಿಗೆ ಕೊರೋನಾ ಸೋಂಕು

ದೇಶ(ನವದೆಹಲಿ)ಏ.21:-ನೇಪಾಳದ ಮಾಜಿ ರಾಜ ಜ್ಞಾನೇಂದ್ರ ಶಾ ಮತ್ತವರ ಪತ್ನಿ ಮತ್ತು ಮಾಜಿ ರಾಣಿ ಕೋಮಲ್ ಷಾ ಅವರು ಹರಿದ್ವಾರದಲ್ಲಿನ ಮಹಾಕುಂಭದಲ್ಲಿ ಭಾಗವಹಿಸಿದ ನಂತರ ಭಾರತದಿಂದ ಹಿಂದಿರುಗಿದ ನಂತರ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ಈ ಮಾಹಿತಿಯನ್ನು ಮಾಧ್ಯಮ ವರದಿಗಳಲ್ಲಿ ನೀಡಲಾಗಿದ್ದು, ಆರೋಗ್ಯ ಸಚಿವಾಲಯದ ಪ್ರಕಾರ, ಎಪ್ಪತ್ತಮೂರು ವರ್ಷದ ಮಾಜಿ ರಾಜ ಮತ್ತು 70 ವರ್ಷದ ಮಾಜಿ ಸಾಮ್ರಾಜ್ಞಿ ಇತ್ತೀಚೆಗೆ ಭಾರತದಿಂದ ಮರಳಿದ್ದರು. ಹರಿದ್ವಾರದ ಹರ್ ಕಿ ಪೌರಿಯಲ್ಲಿ ನಡೆದ ಮಹಾ ಕುಂಭದ ಸಂದರ್ಭದಲ್ಲಿ ಅವರು ಪವಿತ್ರ ಸ್ನಾನ ಮಾಡಿದ್ದರು ಎನ್ನಲಾಗಿದೆ. ಮಹಾಕುಂಭವು ಹಿಂದೂ ಸಂತರು ಮತ್ತು ಭಕ್ತರ ಧಾರ್ಮಿಕ ಸಭೆ ಆಗಿದೆ.
ದಿ ಹಿಮಾಲಯನ್ ಟೈಮ್ಸ್ ವರದಿಯ ಪ್ರಕಾರ ಅವರ ಮಾದರಿಗಳನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆಗೆ ಒಳಪಡಿಸಲಾಯಿತು. ಇದು ಕೋವಿಡ್ -19 ಸೋಂಕನ್ನು ದೃಢಪಡಿಸಿತು. ವರದಿಯ ಪ್ರಕಾರ ಮನೆಗೆ ಹಿಂದಿರುಗಿದ ನಂತರ, ಮಾಜಿ ರಾಜ ಮತ್ತು ಮಾಜಿ ರಾಣಿಯನ್ನು ಸ್ವಾಗತಿಸಲು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಜಮಾಯಿಸಿದ್ದರು. ದಂಪತಿಗಳೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಇದರಿಂದ ಅವರನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: