ಮನರಂಜನೆ

ಮೇ 5 ರಿಂದ ‘ಹ್ಯಾಪಿ ನ್ಯೂ ಇಯರ್’

ಟಿ.ಎಸ್.ನಾಗಾಭರಣ ಅವರ ಪುತ್ರ ಪನ್ನಗಾಭರಣ ನಿರ್ದೇಶಿಸಿರುವ ಬಹು ನಿರೀಕ್ಷಿತ ಚಿತ್ರ ‘ಹ್ಯಾಪಿ ನ್ಯೂ ಇಯರ್’ ಇದೇ ಮೇ 5 ರಂದು  ಪ್ರದರ್ಶನಗೊಳ್ಳಲಿದೆ.

ಸೌಮ್ಯ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬಂದಿರುವ ‘ಹ್ಯಾಪಿ ನ್ಯೂ ಇಯರ್’ ಚಿತ್ರಕ್ಕೆ ವನಜ ಪಾಟೀಲ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸಿನಿಮಾದ ಮೇಕಿಂಗ್ ವೀಡಿಯೋಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾದ ಬಗ್ಗೆ ಹಲವಾರು ಕುತೂಹಲಗಳನ್ನು ಮೂಡಿಸಿದೆ.

ಹಲವು ವರ್ಷಗಳ ನಂತರ ಚಿತ್ರರಂಗಕ್ಕೆ ಹಿಂತಿರುಗಿರುವ ಬಿ.ಸಿ.ಪಾಟೀಲ್ ಚಿತ್ರದಲ್ಲಿ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಸಹ ನಟಿಸಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದ್ದು ವಿಜಯ ರಾಘವೇಂದ್ರ, ದೂದ್ ಪೇಡ ದಿಗಂತ್, ಧನಂಜಯ್, ಸುಧಾರಾಣಿ, ಶ್ರುತಿ ಹರಿಹರನ್, ಸೋನುಗೌಡ, ಸೃಷ್ಟಿ ಪಾಟೀಲ್, ಮಾಳವಿಕಾ ಅವಿನಾಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಐವರು ವಿಭಿನ್ನ ವ್ಯಕ್ತಿಗಳ ಕಥಾ ಸಂಗಮ ಹೊಂದಿರುವ ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ಚಿತ್ರಕ್ಕೆ ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯ ಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಶ್ ಬಲೆಕ್ಕಳ ಸಂಭಾಷಣೆ ಬರೆದಿದ್ದಾರೆ.

 

Leave a Reply

comments

Related Articles

error: