ದೇಶಪ್ರಮುಖ ಸುದ್ದಿ

ಆರ್ ಬಿಐ ಮಾಜಿ ಗವರ್ನರ್ ಎಂ.ನರಸಿಂಹಮ್ ಕೊರೊನಾ ಸೋಂಕಿಗೆ ಬಲಿ

ದೇಶ(ಹೈದರಾಬಾದ್)ಏ.21:- ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾಜಿ ಗವರ್ನರ್ ಎಂ.ನರಸಿಂಹಮ್ ಅವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಎಂ.ನರಸಿಂಹಮ್ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ರಿಸರ್ವ್ ಬ್ಯಾಂಕ್ ಕೇಡರ್ ನಿಂದ ನೇಮಕಗೊಂಡ ಮೊದಲ ಮತ್ತು ಏಕೈಕ ಗವರ್ನರ್ ನರಸಿಂಹಮ್.
ಆರ್ ಬಿಐನಲ್ಲಿ ಕೆಲಸ ಮಾಡಿದ ನಂತರ, ನರಸಿಂಹಮ್ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಸೇರಿದರು, ಅಲ್ಲಿ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ನಂತರ ವಿಶ್ವ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ್ದರು. ಅವರು 1982 ರಲ್ಲಿ ಹಣಕಾಸು ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: