ಮೈಸೂರು

ನಕಲಿ ರೆಮ್ ಡಿಸಿವಿರ್ ಮಾರಾಟ ಪ್ರಕರಣ : ಬಂಧನ

ಮೈಸೂರು,ಏ.21:- ಮೈಸೂರು ನಗರ ಸಿಸಿಬಿ ಪೊಲೀಸರು ಬಯಲಿಗೆಳೆದ ನಕಲಿ ರೆಮ್ ಡಿಸಿವಿರ್ ಮಾರಾಟ ಪ್ರಕರಣದ ಕರಿನೆರಳು ಹೊರರಾಜ್ಯಕ್ಕೂ ಚಾಚಿಕೊಂಡಿರುವುದು ಪತ್ತೆಯಾಗಿದೆ.

ಆಂಧ್ರಪ್ರದೇಶದಿಂದಲೂ ನಕಲಿ ರೆಮ್ ಡಿಸಿವಿರ್ ಖರೀದಿಸಿರುವ ಅಂಶ ಗೊತ್ತಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಮತ್ತು ಪ್ರಶಾಂತ್ ಎಂಬವರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಈಗಾಗಲೇ ಬಂಧನದಲ್ಲಿರುವ ಗಿರೀಶ್ ತಾನು ತಯಾರಿಸುತ್ತಿದ್ದ ನಕಲಿ ರೆಮ್ ಡಿಸಿವಿರ್ ನ್ನು ಔಷಧ ಕಂಪನಿಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಮತ್ತು ಪ್ರಶಾಂತ್ ಎಂಬವರ ಮೂಲಕ ಮಾರಾಟ ಮಾಡುತ್ತಿದ್ದ. ಈಗ ಇವರು ಯಾರಿಗೆ ಮಾಡಿದ್ದಾರೆಂಬ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡಿದ್ದಾರೆ.

ಮೈಸೂರು,ಬೆಂಗಳೂರು ಮಾತ್ರವಲ್ಲದೆ ಆಂಧ್ರಪ್ರದೇಶಕ್ಕೂ ಮಾರಾಟ ಮಾಡಿರುವ ಅಂಶ ಲಭ್ಯವಾಗಿದೆ ಎನ್ನಲಾಗಿದೆ. ಇವರಿಂದ ನಕಲಿ ರೆಮ್ ಡಿಸಿವಿರ್ ಖರೀದಿಸಿದವರ ವಿವರ ಕಲೆ ಹಾಕಲಾಗುತ್ತಿದೆ. ಸುಮಾರು 800ಮಂದಿಗೆ ನಕಲಿ ರೆಮ್ ಡಿಸಿವಿರ್ ನೀಡಲಾಗಿದ್ದು ಇವುಗಳನ್ನು ಪಡೆದ ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ. ರೆಮ್ ಡಿಸಿವಿರ್ ಖಾಲಿ ಬಾಟಲ್ ಗಳನ್ನು ಪೂರೈಸುತ್ತಿದ್ದ ಆರೋಪಿಗಳಾದ ಶಿವಪ್ಪ ಹಾಗೂ ಮಂಗಳಾ ಅವರ ವಿಚಾರಣೆ ತೀವ್ರಗೊಂಡಿದೆ ಎಂದು ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: