ಪ್ರಮುಖ ಸುದ್ದಿಮೈಸೂರು

25ಲಕ್ಷ ಶೌಚಾಲಯ ನಿರ್ಮಿಸುವ ಗುರಿ : ಸಚಿವ ಹೆಚ್.ಕೆ.ಪಾಟೀಲ್

2015-16ನೇ ಪಂಚಾಯತ್ ರಾಜ್ ‘ಇ’ ಪುರಸ್ಕಾರ ಕರ್ನಾಟಕಕ್ಕೆ ಲಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ ಫಾರ್ಮೇಶನ್ & ಕಮ್ಯುನಿಕೇಶನ್ ಟೆಕ್ನಾಲಜಿಯು ಪ್ರತಿವರ್ಷ ಒಂದೊಂದು ಉತ್ತಮ ರಾಜ್ಯವನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ಕಳೆದ ಬಾರಿಯೂ ಕರ್ನಾಟಕಕ್ಕೆ ಪುರಸ್ಕಾರ ಲಭಿಸಿತ್ತು. 2018ರ ಮೇನಲ್ಲಿ ಕರ್ನಾಟಕವನ್ನು ಬಯಲುಮುಕ್ತ ಶೌಚಾಲಯವನ್ನಾಗಿ ಮಾಡಬೇಕೆನ್ನುವ ಉದ್ದೇಶ ಹೊಂದಿದ್ದು ಬಯಲು ಶೌಚಾಲಯ ವಿರುದ್ಧ ಸಮರ ಶೀರ್ಷಿಕೆಯಡಿ 25ಲಕ್ಷ ಶೌಚಾಲಯ ನಿರ್ಮಿಸುವ ಗುರಿಹೊಂದಲಾಗಿದೆ. ಈಗಾಗಲೇ ಶೇ.70ರಷ್ಟು ಕಾಮಗಾರಿ ಮುಗಿದಿದೆ. ಶೇ.30ರಷ್ಟು ಬಾಕಿ ಇದೆ. ಈ ವರ್ಷದ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.

ಕೇಂದ್ರ ಸರ್ಕಾರ ಕೆಂಪುದೀಪ ನಿಷೇಧ ಮಾಡಿ ಆದೇಶ ಹೊರಡಿಸಿರುವುದರ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನಾನಂತು ಅದನ್ನು ಪಾಲಿಸುತ್ತೇನೆ. ನನ್ನ ಕಾರಿನ ಮೇಲಿನ ಕೆಂಪು ದೀಪ ತೆಗೆಸಿದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮುಖ್ಯಮಂತ್ರಿಗಳು, ಡಾ.ಜಿ.ಪರಮೇಶ್ವರ್ ಮತ್ತು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

(ಎಸ್.ಎನ್-ಎಸ್.ಎಚ್)

Leave a Reply

comments

Related Articles

error: