ಮೈಸೂರು

ಕೋವಿಡ್-19 ನಿಯಂತ್ರಣದ ಸಂಬಂಧ ಸರ್ಕಾರ ಹೊರಡಿಸಿದ ನಿಯಮ  ಉಲ್ಲಂಘನೆ : ಪ್ರಕರಣ ದಾಖಲು

ಮೈಸೂರು,ಏ.21:-  ಕೋವಿಡ್-19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದ್ದು, ಇವುಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಮೈಸೂರು ನಗರದ ಪೊಲೀಸರು ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದು, ಸಾಮಾಜಿಕ ಅಂತರವಿಲ್ಲದೆ. ಮಾಸ್ಕ್ ಧರಿಸದೆ ಇರುವ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ ನಡೆಸುವ ಮೂಲಕ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಹಾಗೂ The Disaster Management act-2005ರ ಅಡಿಯಲ್ಲಿ  ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದ್ದಾರೆ.

ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ರಿಂಗ್ ರಸ್ತೆಯ ಸಿಗ್ನಲ್ ಹತ್ತಿರ ಇರುವ ಚಾಮುಂಡೇಶ್ವರಿ ಬಿರಿಯಾನಿ ಹೋಟೆಲ್‍ ಮ ಕೆಲಸಗಾರ ಧನುಶ್ ಜೆ. ಗೌಡ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೂರು ಮುಖ್ಯ ರಸ್ತೆಯಲ್ಲಿರುವ ಬಿ ಎಂ ಹ್ಯಾಬಿಟೇಟ್ ಮಾಲ್‍ ನ  ಬಳಿ ಇರುವ ಹೋಟೆಲ್ ಲೊಫ್ಟ್ ಕೆಫೆ, ವೆಜ್ ರೆಸ್ಟೋರೆಂಟ್‍ನ ಮಾಲೀಕ ರವಿಕಿರಣ್ ಎಂ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಉದಯಗಿರಿ ಪೊಲೀಸ್ ಠಾಣಾ ಸರಹದ್ದಿನ ರಾಜೀವ್‍  ನಗರ ರಿಂಗ್ ರಸ್ತೆ, ಯಾಸೀನ್ ಮಸೀದಿ ಹತ್ತಿರವಿರುವ ಯಾಸೀನ್ ರೆಸ್ಟೋರೆಂಟ್‍ನ ಹೋಟೆಲ್‍ನ ಮಾಲೀಕ ನಾಸೀರ್‍ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣಾ ಸರಹದ್ದಿನ ಅಬ್ದುಲ್ ರೆಹಮಾನ್ ರಸ್ತೆ, ಕ್ಯೂಬಾ ಮಸೀದಿ ಹತ್ತಿರವಿರುವ ಮದೀನಾ ಪ್ರಾವಿಜನ್ ಸ್ಟೋರ್ ಮಾಲೀಕ ಮಾನ್ಸೂರ್ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಕೋವಿಡ್-19 ನಿಯಮಗಳ ಜಾರಿ ಸಂಬಂಧ ನಗರ ಪೊಲೀಸರು ಇದೇ ರೀತಿ ಪ್ರತಿ ದಿನ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳ ಕಡೆ ಭೇಟಿ ನೀಡಿ ಪರಿಶೀಲಿಸಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಿದ್ದು, ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಸ್ಥಳದಂಡವನ್ನು ವಿಧಿಸಲಾಗುವುದು ಎಂದು  ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ  ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: