ಮೈಸೂರು

ಮೈಸೂರು ಮಹಾನಗರ ಪಾಲಿಕೆಗೆ ಮತ್ತೊಮ್ಮೆ ಕೊರೊನ ಕಂಟಕ :ತೆರಿಗೆ ವಿಭಾಗದ ಸಿಬ್ಬಂದಿಗೆ ಕೊರೋನಾ ಸೋಂಕು

ಮೈಸೂರು,ಏ.21:- ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳಿಗೆ  ಮತ್ತೊಮ್ಮೆ ಕೊರೊನ ಕಂಟಕ ಎದುರಾಗಿದೆ.

ನಿನ್ನೆ ಪಾಲಿಕೆಯ ಮತ್ತೋರ್ವ  ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.  ಪಾಲಿಕೆ ಆವರಣದಲ್ಲಿರುವ ತೆರಿಗೆ ವಿಭಾಗದ ಕಟ್ಟಡದ ಸಿಬ್ಬಂದಿಗೆ ಸೋಂಕು ದೃಢ ಪಟ್ಟಿದೆ. ಈ ಹಿನ್ನೆಲೆ ತೆರಿಗೆ ವಿಭಾಗದ ಕಟ್ಟಡಕ್ಕೆ ಮಾತ್ರ ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದೆ. ಪಾಲಿಕೆಯ ಅಭಯ ಟೀಮ್ ನ ಸಿಬ್ಬಂದಿಗಳು ಕಟ್ಟಡವನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಿದ್ದಾರೆ. ಕಳೆದ ಎರಡು ವಾರಗಳಿಂದ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳನ್ನು ಕೊರೋನಾ ಬೆಂಬಿಡದೆ ಕಾಡುತ್ತಿದೆ. ಎರಡು ವಾರಗಳಲ್ಲಿ ಪಾಲಿಕೆಯ 25ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಬಹುತೇಕ ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಳೆದ ವಾರವಷ್ಟೇ ಸೋಂಕಿಗೆ  ಪಾಲಿಕೆಯ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: