ಪ್ರಮುಖ ಸುದ್ದಿವಿದೇಶ

ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ: ಪೊಲೀಸ್ ಅಧಿಕಾರಿ ಅಪರಾಧಿ; ಕೋರ್ಟ್ ತೀರ್ಪು

ವಾಷಿಂಗ್ಟನ್,ಏ.21-ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ನನ್ನು ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಡೆರೆಕ್ ಚೌವಿನ್ ದೋಷಿ ಎಂದು ಹೆನ್ನೆಪಿನ್ ಕೌಂಟಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮರಿಕ ಅಧ್ಯಕ್ಷ ಜೋ ಬೈಡನ್ , ಈ ತೀರ್ಪು ಅಮೆರಿಕ ನ್ಯಾಯ ಪಥದಲ್ಲಿ ಮುನ್ನಡೆಗೆ ಒಂದು ದೊಡ್ಡ ಹೆಜ್ಜೆ, ಜಾರ್ಜ್ ಫ್ಲಾಯ್ಡ್‌ನನ್ನು ಮರಳಿ ತರಲು ಸಾಧ್ಯವಾಗದಿದ್ದರೂ, ಇದು ಅಮೆರಿಕದ ನ್ಯಾಯ ವ್ಯವಸ್ಥೆಯ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚಾಗುವಂತಾಗಿದೆ ಎಂದಿದ್ದಾರೆ.

ಅಮೆರಿಕದ ಮಿನಿಯಾಪೊಲಿಸ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ವಶದಲ್ಲಿದ್ದಾಗಲೇ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿದ್ದರು. ಈ ಪ್ರಕರಣ ಭಾರಿ ಕೋಲಾಹಲ ಸೃಷ್ಟಿ ಮಾಡಿತ್ತು. ಜಾರ್ಜ್ ಕುತ್ತಿಗೆ ಮೇಲೆ ಕಾಲು ಒತ್ತಿ ಹಿಡಿದು ಡೆರೆಕ್ ಚೌವಿನ್ ಅಮಾನವೀಯವಾಗಿ ವರ್ತಿಸಿದ್ದರು. ಇದರಿಂದಾಗಿ ಫ್ಲಾಯ್ಡ್ ಮೃತಪಟ್ಟು ಅಮೆರಿಕದಲ್ಲಿ ಭಾರಿ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಜನಾಂಗೀಯ ದೌರ್ಜನ್ಯವೆಂದು ಭಾರಿ ಆಕ್ರೋಶವೂ ವ್ಯಕ್ತವಾಗಿತ್ತು.

ಅಮೆರಿಕದಲ್ಲಿ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದ ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಅಂದರೆ 27 ಮಿಲಿಯನ್ ಡಾಲರ್ ಪರಿಹಾರಕ್ಕೆ ಮಿನಿಯಾಪೊಲಿಸ್‌ನ ನಗರ ಕೌನ್ಸಿಲ್ ಒಪ್ಪಿಗೆ ಸೂಚಿಸಿದೆ. ಫ್ಲಾಯ್ಡ್ ಹತ್ಯೆ ನಂತರ ಅಮೆರಿಕದಲ್ಲಿ ಸಾವಿರಾರು ಕೋಟಿ ನಷ್ಟವಾಗಿತ್ತು, ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಬೃಹತ್ ಮೊತ್ತದ ಪರಿಹಾರ ಘೋಷಿಸಿದೆ. ಪ್ರತಿಭಟನೆಯನ್ನು ತಪ್ಪಿಸಲು ಪರಿಹಾರ ಘೋಷಿಸಲಾಗಿದೆ ಎನ್ನಲಾಗಿತ್ತು.  (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: