ಮೈಸೂರು

ಸರಗೂರಿನಲ್ಲಿ ಬೋನಿಗೆ ಬಿದ್ದ ಚಿರತೆ

ಮೈಸೂರು,ಏ.21:- ಎಚ್ ಡಿ ಕೋಟೆ ತಾಲೂಕು ಹಂಪಾಪುರ  ಹೋಬಳಿ ಜಿ ಬಿ  ಸರಗೂರಿನಲ್ಲಿ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ನಡೆದಿದೆ.

ಜಿ ಬಿ  ಸರಗೂರಿನಲ್ಲಿ ತಿಮ್ಮಾಚಾರಿ ಎಂಬವರ ಜಮೀನಿನಲ್ಲಿ ಚಿರತೆಯ ಸೆರೆಗೆ ಅರಣ್ಯಾಧಿಕಾರಿಗಳು ಬೋನ್  ಒಂದನ್ನು ಇರಿಸಿದ್ದರು.    ಇಂದು ಬೆಳಿಗ್ಗೆ ಹೆಣ್ಣು ಚಿರತೆಯೊಂದು  ಬೋನಿಗೆ ಬಿದ್ದಿದೆ.   ಬೋನಿಗೆ ಬಿದ್ದ ಚಿರತೆಯನ್ನು  ಹ್ಯಾಂಡ್ ಪೋಸ್ಟಿನ ಅರಣ್ಯ ಪ್ರವಾಸಿ ಮಂದಿರಕ್ಕೆ ತಂದು ನಂತರ ಪಶು  ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿದ್ದಾರೆ.  ಹೆಣ್ಣು ಚಿರತೆ ಆರೋಗ್ಯವಾಗಿದೆ ಎಂದು ದೃಢಪಡಿಸಿದ್ದಾರೆ.  ಇದನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗುವುದು ಎಂದು ಹೆಚ್ ಡಿ ಕೋಟೆ ವಲಯಾರಣ್ಯಧಿಕಾರಿಗಳಾದ ಸುನಿತಾ ಪಿ ಎನ್    ತಿಳಿಸಿದ್ದಾರೆ.

ಈ ಸಂದರ್ಭ ಅರಣ್ಯ ರಕ್ಷಕ ಸುರೇಂದ್ರ ಮತ್ತು ಅರಣ್ಯ ಸಿಬ್ಬಂದಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: