ಮೈಸೂರು

ಕೋವಿಡ್ 19 ನಿಯಮಗಳ ಜಾರಿ ಮತ್ತು ಜಾಗೃತಿ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಿದ ಪಾಲಿಕೆಯ ಆಯುಕ್ತರು-ಪೊಲೀಸ್ ಸಿಬ್ಬಂದಿಗಳು

ಮೈಸೂರು, ಏ.21:- ಮೈಸೂರು ನಗರ ಪೊಲೀಸ್ ದೇವರಾಜ ವಿಭಾಗ ಕೋವಿಡ್ 19 ನಿಯಮಗಳ ಜಾರಿ ಮತ್ತು ಜಾಗೃತಿಯನ್ನು ಪಾಲಿಕೆಯ ಸಹಯೋಗದೊಂದಿಗೆ ನಡೆಸುತ್ತಿದ್ದು, ಅಭಿಯಾನದಲ್ಲಿ ಪಾಲಿಕೆಯ ಆಯುಕ್ತರಾದ ಶಿಲ್ಪಾನಾಗ್, ಡಿಸಿಪಿ ಗೀತ ಪ್ರಸನ್ನ ಮತ್ತಿತರ ಪಾಲಿಕೆಯ ಅಧಿಕಾರಿಗಳು, ಮತ್ತು ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡು ಜಾಗೃತಿ ಮೂಡಿಸಿದರು.

ಮೈಸೂರಿನ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅಂಗಡಿ ಮುಂಗಟ್ಟುಗಳ ಜನಸಂದಣಿ ಇರುವ ಪ್ರದೇಶಗಳಿಗೆ ತೆರಳಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳಿಸಿ ಹೇಳಿದರಲ್ಲದೆ, ಮಳಿಗೆಗಳ ಮಾಲಕರಿಗೂ ಎಚ್ಚರಿಕೆ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಮ್ಮ ನಿಮ್ಮ ಮಳಿಗೆಗಳ ಮುಂದೆ ಜನರನ್ನು ಬಿಟ್ಟುಕೊಂಡಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಸಿದರು. ಮಳಿಗೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅಗತ್ಯ ಎಂಬುದನ್ನು ತಿಳಿಸಿ ಹೇಳುವಂತೆ ಮಾಲಿಕರಿಗೆ ತಿಳಿಸಿದರು. (ಕೆ.ಎಸ್,ಎಸ್.ಎಚ್)

ಇದನ್ನೂ ಓದಿ

ಕೊರೋನಾ ಅಲೆ ತಡೆಗೆ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ನಡೆಸಲಿರುವ ಪಾಲಿಕೆಯ ಆಯುಕ್ತರ ತಂಡ : ಎಚ್ಚರತಪ್ಪಿದಲ್ಲಿ ದಂಡ ಗ್ಯಾರಂಟಿ

Leave a Reply

comments

Related Articles

error: