ಮನರಂಜನೆ

ನಟಿ ಹಿನಾಖಾನ್ ಗೆ ಪಿತೃ ವಿಯೋಗ

ದೇಶ(ಮುಂಬೈ)ಏ.21:- ಚಿತ್ರರಂಗದಲ್ಲಿ ಅಲ್ಪಾವಧಿಯಲ್ಲಿಯೇ ಯಶಸ್ಸನ್ನು ಸಾಧಿಸುವ ನಟಿಯರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ.   ಮುಂಬೈಗೆ ಬರುವ ಪ್ರತಿಯೊಬ್ಬ ನಟ-ನಟಿಯರು ಚಲನಚಿತ್ರಗಳೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಲು ಕನಸು ಕಾಣುತ್ತಾರೆಯೇ ವಿನಃ ಟಿವಿಯಿಂದ ಅಲ್ಲ, ಏಕೆಂದರೆ ಚಲನಚಿತ್ರಗಳನ್ನು ಯಶಸ್ಸಿನ ಮೊದಲ ಮೆಟ್ಟಿಲು ಎಂದು ಪರಿಗಣಿಸಲಾಗುತ್ತದೆ, ಆದರೆ ನಟಿ ಹಿನಾ ಖಾನ್   ಟಿವಿಯ ಮೂಲಕವೇ ಪರಿಚಿತವಾಗಿದ್ದಾರೆ.  ಪ್ರಸಿದ್ಧ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಹಿನಾ ಖಾನ್ ಅವರ ತಂದೆ ಆಕಸ್ಮಿಕವಾಗಿ ನಿಧನರಾಗಿದ್ದಾರೆ.

ಹಿನಾಳ ತಂದೆಯ ನಿಧನದಿಂದ ಇಡೀ ಕುಟುಂಬವು ದುಃಖದಲ್ಲಿ ಮುಳುಗಿದೆ.  ಹಿನಾ ಪ್ರಸ್ತುತ ಕಾಶ್ಮೀರದಲ್ಲಿದ್ದರು, ಆದರೆ ತನ್ನ ತಂದೆಯ ನಿಧನದ ಸುದ್ದಿ ತಿಳಿದ ಕೂಡಲೇ ಮುಂಬೈಗೆ ಮರಳಿದ್ದಾರೆ. ಹಿನಾ   ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದ್ದು ತುಂಬಾ ಭಾವುಕಳಾಗಿದ್ದರು. ಏಕೆಂದರೆ ಹಿನಾ   ತನ್ನ ತಂದೆಗೆ ತುಂಬಾ ಹತ್ತಿರವಾಗಿದ್ದರು. ಇತ್ತೀಚೆಗೆ, ಲಾಕ್ ಡೌನ್ ನಂತರ ಇಡೀ ಕುಟುಂಬವು ದೀರ್ಘ ರಜೆಯ ಮೇಲೆ ತೆರಳಿತ್ತು. ಅಲ್ಲಿಂದ, ಹಿನಾ ತನ್ನ ತಂದೆಯ ಜೊತೆ ಇರುವ ವಿಡಿಯೋವೊಂದನ್ನು  ಸಹ   ಹಂಚಿಕೊಂಡಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: