ಪ್ರಮುಖ ಸುದ್ದಿಮನರಂಜನೆ

ಸಾಬ್ರಿ ಬ್ರದರ್ಸ್ ಖ್ಯಾತಿಯ ಕವ್ವಾಲಿ ಗಾಯಕ ಫರೀದ್ ಸಾಬ್ರಿ ನಿಧನ

ದೇಶ(ಮುಂಬೈ)ಏ.22:- ದೇಶ ಮತ್ತು ವಿದೇಶಗಳಲ್ಲಿ ಕವ್ವಾಲಿ ಹಾಡಿ ಪ್ರಸಿದ್ಧರಾಗಿದ್ದ ಕವ್ವಾಲಿ ಗಾಯಕ  ‘ಸಾಬ್ರಿ ಬ್ರದರ್ಸ್’ ಖ್ಯಾತಿಯ ಫರೀದ್ ಸಾಬ್ರಿ ನಿಧನರಾದರು.
ಹಠಾತ್ ಅನಾರೋಗ್ಯದ ಕಾರಣ ಅವರನ್ನು ಮಂಗಳವಾರ ರಾತ್ರಿ ಅಜ್ಮೀರ್‌ನ ವೇದಾಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಸಾಬ್ರಿ ಬ್ರದರ್ಸ್ ಖ್ಯಾತಿಯ ಎರಡನೇ ಸಹೋದರ ಅಮಿನ್ ಸಾಬ್ರಿ ಮಾಹಿತಿ ನೀಡಿ, “ಕಳೆದ 4-5 ದಿನಗಳಿಂದ ಫರೀದ್ ಸಾಬ್ರಿ ಅನಾರೋಗ್ಯದಿಂದ ಬಳಲುತ್ತಿದ್ದರು. ನ್ಯುಮೋನಿಯಾವಿತ್ತು. ಇಂತಹ ಪರಿಸ್ಥಿತಿಯಲ್ಲಿ ಕಳೆದ ರಾತ್ರಿ ಅವರ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ಸೋಂಕು ಹೆಚ್ಚಿದ ಕಾರಣ ಮತ್ತು ನ್ಯುಮೋನಿಯಾ ಹೆಚ್ಚಿದ್ದರಿಂದ ಅವರು ನಿಧನರಾದರು.
ಫರೀದ್ ಸಾಬ್ರಿ ಅವರಿಗೆ ಕೊರೋನಾ ಆಗಿರಲಿಲ್ಲ ಎಂದು ಅಮೀನ್ ಸಾಬ್ರಿ ಹೇಳಿದ್ದಾರೆ. ನಿಧನದ ನಂತರ, ಫರೀದ್ ಸಾಬ್ರಿಯನ್ನು ಪೂರ್ಣ ಸಂಪ್ರದಾಯದೊಂದಿಗೆ ಘಾಟ್‌ಗೇಟ್‌ನ ಮಿಸ್ಕಿನ್ ಷಾ ಖಬರ್ ಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಫರೀದ್ ಸಾಬ್ರಿ, ತಮ್ಮ ಸಹೋದರ ಮತ್ತು ತಂದೆಯೊಂದಿಗೆ ದೇಶ ಮತ್ತು ವಿದೇಶಗಳಲ್ಲಿ ಕವ್ವಾಲಿಯಾ ಹಾಡುವುದರ ಹೊರತಾಗಿ ಬಾಲಿವುಡ್ ಚಿತ್ರಗಳಲ್ಲಿ ಕೆಲವು ಜನಪ್ರಿಯ ಹಾಡುಗಳನ್ನು ಹಾಡಿದರು. ಫರೀದ್ ಸಾಬ್ರಿ, ಅವರ ತಂದೆ ಸಯೀದ್ ಸಾಬ್ರಿ ಅವರೊಂದಿಗೆ, ಆರ್.ಕೆ ಬ್ಯಾನರ್ ಹಿಟ್ ಚಿತ್ರ ‘ಹಿನಾ’ದಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ’ ದೆರ್ ನ ಹೋ ಜಾಯೇ ಕಹಿ ದೇರ್ ನ ಹೋ ಜಾಯೆ’ ಹಾಡನ್ನು ಹಾಡಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: