ದೇಶಪ್ರಮುಖ ಸುದ್ದಿ

ಕೊರೊನಾ ಸೋಂಕಿಗೆ ನಟ ಚಿರಂಜೀವಿ ಕ್ಯಾರವಾನ್ ಚಾಲಕ ಬಲಿ

ಹೈದರಾಬಾದ್,ಏ.22-ಮೆಗಾಸ್ಟಾರ್ ಚಿರಂಜೀವಿ ಅವರ ಕ್ಯಾರವಾನ್ ಚಾಲಕ ಕೊರೊನಾ ವೈರಸ್‌ ಮಹಾಮಾರಿಗೆ  ಬಲಿಯಾಗಿದ್ದಾರೆ.

ತಮ್ಮ ಕ್ಯಾರವಾನ್ ಚಾಲಕನ ಸಾವಿನ ಸುದ್ದಿ ಕೇಳಿ ಚಿರಂಜೀವಿ ಹಾಗೂ ರಾಮ್ ಚರಣ್ ಆಘಾತಗೊಂಡಿದ್ದಾರೆ. ಚಾಲಕನ ಸಾವಿನ ಸುದ್ದಿಯಿಂದ ತೀವ್ರವಾಗಿ ನೊಂದಿರುವ ಚಿರಂಜೀವಿ ‘ಆಚಾರ್ಯ’ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಕೊರೊನಾ ಭೀತಿ ಇರುವುದರಿಂದ ಸದ್ಯಕ್ಕೆ ‘ಆಚಾರ್ಯ’ ಶೂಟಿಂಗ್ ನಡೆಸದಿರಲು ಚಿರಂಜೀವಿ ತೀರ್ಮಾನಿಸಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ತೆಲುಗು ಸಿನಿ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ಹಾಕುವ ಅಭಿಯಾನಕ್ಕೆ ನಟ ಚಿರಂಜೀವಿ ಕೈ ಜೋಡಿಸಿದ್ದಾರೆ. ಅಪೋಲೋ ಸಂಸ್ಥೆಯ ಜೊತೆ ಚಿರಂಜೀವಿ ಅವರು ಸಿನಿಮಾ ಕಾರ್ಮಿಕರು, ಕಲಾವಿದರು, ಪತ್ರಕರ್ತರಿಗೆ ಉಚಿತ ಲಸಿಕೆ ಕೊಡಿಸಲು ಮುಂದಾಗಿದ್ದಾರೆ. ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೆ ತಮ್ಮ ಕ್ಯಾರವಾನ್ ಚಾಲಕ ಕೊನೆಯುಸಿರೆಳೆದಿರುವುದು ಬೇಸರ ಮೂಡಿಸಿದೆ.

ಆಚಾರ್ಯ ಸಿನಿಮಾದ ಚಿತ್ರೀಕರಣ ಇನ್ನು 10-15 ದಿನ ಮುಗಿಯಲಿದೆ. ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ಹಾಗಾಗಿ, ಚಿತ್ರಕ್ಕಿಂತ ಸಿನಿಮಾದಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳ ಆರೋಗ್ಯದ ಮೇಲೆ ರಾಮ್ ಚರಣ್ ಹೆಚ್ಚಿನ ಗಮನ ಕೊಟ್ಟಿದ್ದಾರೆ ಎನ್ನಲಾಗಿದೆ.

ಮೆಗಾ ಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ‘ಆಚಾರ್ಯ’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು. ಇದೇ ಚಿತ್ರದಲ್ಲಿ ನಟಿಸುತ್ತಿದ್ದ ನಟ ಸೋನು ಸೂದ್‌ಗೆ ಇತ್ತೀಚೆಗಷ್ಟೇ ಕೊರೊನಾ ವೈರಸ್ ಸೋಂಕು ತಗುಲಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: