ಮೈಸೂರು

ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿ ಚರ್ಚೆ : ಸಚಿವ ಎಸ್.ಟಿ.ಎಸ್ ಮಾಹಿತಿ

ಮೈಸೂರು, ಏ.22:- ಮೈಸೂರಿನಲ್ಲಿ ಕೋವಿಡ್ ಜಾಸ್ತಿ ಆಗುತ್ತಿರೋದಕ್ಕೆ ಕಾರಣ ಏನು ಎಂಬುದನ್ನು  ತಿಳಿದುಕೊಳ್ಳಲು ಇಂದು ಸಭೆ ನಡೆಸಲಾಗುತ್ತಿದೆ ಅದಕ್ಕಾಗಿಯೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೈಸೂರಿಗೆ ಬಂದಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾಡಳಿತ ಜೊತೆ ಸಭೆ ನಡೆಸಿ, ಜಾಸ್ತಿ ಆಗುತ್ತಿರೋದಕ್ಕೆ ಕಾರಣ ಏನು, ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಟ್ರಾಮಾ ಸೆಂಟರ್ ಗೆ. ಜಿಲ್ಲಾ ಆಸ್ಪತ್ರೆಗೆ. ನಾರಾಯಣ ಆಸ್ಪತ್ರೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸಚಿವದ್ವಯರಾದ ಎಸ್ ಟಿ ಎಸ್, ಡಾ.ಕೆ.ಸುಧಾಕರ್ ಭೇಟಿ ನೀಡಿದರು. ಕೋವಿಡ್ ಲಸಿಕೆ ವಿತರಣೆ, ಚಿಕಿತ್ಸೆ ಬಗ್ಗೆ ವಿಚಾರಣೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ , ಶಾಸಕರಾದ ಎಲ್ ನಾಗೇಂದ್ರ, ವೈದ್ಯಾಧಿಕಾರಿಗಳು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Leave a Reply

comments

Related Articles

error: