ದೇಶಪ್ರಮುಖ ಸುದ್ದಿ

ಕೊರೋನಾ ಹೆಚ್ಚಳ ಹಿನ್ನೆಲೆ ; ಎಮಿರೇಟ್ಸ್ ಏರ್ಲೈನ್ಸ್ ಪ್ರಕಟಣೆ ಏಪ್ರಿಲ್ 25 ರಿಂದ 10 ದಿನಗಳ ಕಾಲ ದುಬೈ-ಭಾರತ ನಡುವೆ ವಿಮಾನ ಹಾರಾಟವಿಲ್ಲ

ದೇಶ(ನವದೆಹಲಿ)ಏ.23:- ಭಾರತದಲ್ಲಿ ಕೊರೋನಾ ಹೆಚ್ಚಳದಿಂದ ಒಂದು ಕಡೆ ಬ್ರಿಟನ್ ಕೆಂಪು ಪಟ್ಟಿಯಲ್ಲಿ ಸೇರಿಸಿದೆ, ಮತ್ತೊಂದೆಡೆ ಎಮಿರೇಟ್ಸ್ ಏರ್ಲೈನ್ಸ್ ದುಬೈ ಮತ್ತು ಭಾರತದ ನಡುವಿನ ಎಲ್ಲಾ ವಿಮಾನ ಹಾರಾಟವನ್ನು 10 ದಿನಗಳವರೆಗೆ ನಡೆಸಲ್ಲ ಎಂದು ಘೋಷಿಸಿದೆ. ಏಪ್ರಿಲ್ 25 ರಿಂದ ಮುಂದಿನ ಹತ್ತು ದಿನಗಳವರೆಗೆ ಭಾರತ ಮತ್ತು ದುಬೈ ನಡುವೆ ತಮ್ಮ ವಿಮಾನಗಳ ಹಾರಾಟವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದಿಂದ ಬರುವ ಪ್ರವಾಸಿಗರಿಗೆ ಫ್ರಾನ್ಸ್ ಹೊಸ ಪ್ರವೇಶ ನಿರ್ಬಂಧಗಳನ್ನು ವಿಧಿಸಲಿದೆ. ಈ ಮಾಹಿತಿಯನ್ನು ಅಧಿಕಾರಿಯೊಬ್ಬರು ಬುಧವಾರ ನೀಡಿದ್ದಾರೆ. ಈ ಹಿಂದೆ ಬ್ರೆಜಿಲ್, ಅರ್ಜೆಂಟೀನಾ ಮತ್ತು ಚಿಲಿಯಿಂದ ಬರುವ ಪ್ರವಾಸಿಗರನ್ನು ಸಹ ನಿಷೇಧಿಸಲಾಗಿದೆ.
ಶನಿವಾರದಿಂದ ಭಾರತೀಯ ಪ್ರವಾಸಿಗರ ಪ್ರವೇಶಕ್ಕೆ ಹೊಸ ಪ್ರವೇಶ ನಿರ್ಬಂಧ ಹೇರಲಾಗುತ್ತಿದೆ. ಮೇ 3 ರಿಂದ ಫ್ರಾನ್ಸ್ ದೇಶೀಯ ಪ್ರಯಾಣದ ನಿಷೇಧವನ್ನು ತೆಗೆದುಹಾಕಲಿದೆ ಎಂದು ಸರ್ಕಾರದ ವಕ್ತಾರ ಗೇಬ್ರಿಯಲ್ ಅಟಲ್ ದೃಢಪಡಿಸಿದರು, ಆದರೆ ಸಂಜೆ ಏಳು ರಿಂದ ಬೆಳಿಗ್ಗೆ ಆರರವರೆಗೆ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: