ದೇಶಪ್ರಮುಖ ಸುದ್ದಿ

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 332,730 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ

ದೇಶ(ನವದೆಹಲಿ)ಏ.23:- ಕೊರೋನಾ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾತವು ಈಗ ಯುಎಸ್ ಅನ್ನು ಮೀರಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳು ಭಾರತದಲ್ಲಿ ಕಂಡು ಬರುತ್ತಿವೆ.
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ, 332,730 ಹೊಸ ಕೊರೋನಾ ಸೋಂಕು ಪ್ರಕರಣಗಳು ಕಂಡು ಬಂದಿವೆ. 2263 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 193,279 ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.
ಬುಧವಾರ ದೇಶದಲ್ಲಿ 314,835 ಹೊಸ ಪ್ರಕರಣಗಳು ದಾಖಲಾಗಿವೆ. ಜನವರಿ 8 ರಂದು ಯುಎಸ್ ನಲ್ಲಿ ಗರಿಷ್ಠ ಮೂರು ಲಕ್ಷ ಏಳು ಸಾವಿರ ಪ್ರಕರಣಗಳು ದಾಖಲಾಗಿತ್ತು.
ಒಂದು ಕೋಟಿ 62 ಲಕ್ಷ 63 ಸಾವಿರ 695 ಪ್ರಕರಣ ಪತ್ತೆಯಾಗಿದ್ದು, ಒಂದು ಕೋಟಿ 36 ಲಕ್ಷ 48 ಸಾವಿರ 159ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24 ಲಕ್ಷ 28 ಸಾವಿರ 616 ಇದೆ. ಒಟ್ಟು 1 ಲಕ್ಷ 86 ಸಾವಿರ 920 ಸಾವು ಸಂಭವಿಸಿದೆ. 13 ಕೋಟಿ 54 ಲಕ್ಷ 78 ಸಾವಿರ 420 ಡೋಸ್ ಲಸಿಕೆ ಗಳನ್ನು ನೀಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: