ಕರ್ನಾಟಕಪ್ರಮುಖ ಸುದ್ದಿ

ಆಸ್ಪತ್ರೆಯಿಂದ ಹೊರಗೋಡಿ ಬಂದು ಚರ್ಚ್‌ ಬಳಿ ಪ್ರಾರ್ಥಿಸಿದ ಕೋವಿಡ್ ಸೋಂಕಿತೆ

ರಾಜ್ಯ(ಹಾಸನ)ಏ.23:-   ಕೋವಿಡ್‌ ಸೋಂಕಿತೆಯೋರ್ವರು ಆಸ್ಪತ್ರೆಯಿಂದ ಹೊರಗೋಡಿ ಬಂದು ಚರ್ಚ್‌ ಬಳಿ ಪ್ರಾರ್ಥಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಆಸ್ಪತ್ರೆಗೆ ಮಹಿಳೆಯೋರ್ವರು ಕೋವಿಡ್ ಗೆ ಚಿಕಿತ್ಸೆಗಾಗಿ  ದಾಖಲಾಗಿದ್ದರು. ಪ್ರಾಣ ಭಯದಿಂದ ಹೊರಗೋಡಿ ಬಂದ ಮಹಿಳೆ ಚರ್ಚ್‌ ಮುಂದೆ ಕುಳಿತು ದೇವರೇ ನನ್ನ ಉಳಿಸಪ್ಪಾ ಎಂದು  ಕಣ್ಣೀರಿಡುತ್ತಾ ಚರ್ಚ್ ಎದುರು ಕೂತು  ಪ್ರಾರ್ಥನೆ ಮಾಡಿದ್ದಾರೆ. ಬಳಿಕ‌ ಆಸ್ಪತ್ರೆ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಮಹಿಳೆಯ ಮನವೊಲಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: