ಮೈಸೂರು

ಆಕಸ್ಮಿಕ ವಿದ್ಯುತ್ ಪ್ರವಹಿಸಿ ಸದ್ಯದಲ್ಲೇ ಹಸೆ ಮಣೆ ಏರಬೇಕಿದ್ದ ಲೈನ್ ಮ್ಯಾನ್ ಸಾವು

ಮೈಸೂರು,ಏ.23:- ಒಮ್ಮೆಲೇ ವಿದ್ಯುತ್ ಪ್ರವಹಿಸಿದ ಕಾರಣ  ವಿವಾಹ ನಿಶ್ಚಯವಾಗಿದ್ದ ಜ್ಯೂನಿಯರ್ ಲೈನ್ ಮ್ಯಾನ್ ಓರ್ವರು      ಮೃತಪಟ್ಟ ಘಟನೆ ಪಿರಿಯಾಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ.

ಮೃತರನ್ನು ಮೂಲತಃ ದಾವಣಗೆರೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ವಿದ್ಯುತ್ ಉಪ ಕೇಂದ್ರದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ  ಅಮೀರ್ ಖಾನ್ (25)  ಎಂದು ಹೇಳಲಾಗಿದೆ.   ನಿನ್ನೆ  ಸಾಯಂಕಾಲ 4 ಗಂಟೆಯ ಸುಮಾರಿಗೆ ಕಿರಿಯ ಅಭಿಯಂತರರ ಬಳಿ ಅನುಮತಿ ಪಡೆದು ಪಿರಿಯಾಪಟ್ಟಣ ತಾಲೂಕಿನ ಸುಬ್ಬಯ್ಯನ ಕೊಪ್ಪಲು ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ರಿಪೇರಿ ಮಾಡುತ್ತಿರುವಾಗ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಟ್ರಾನ್ಸ್‌ಫಾರ್ಮರ್‌ ನಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಮೀರ್ ಖಾನ್ ಇತ್ತೀಚಿಗಷ್ಟೇ ನೌಕರಿ ಪಡೆದು ಪಿರಿಯಾಪಟ್ಟಣದಲ್ಲಿ ವಾಸವಿರಬೇಕು ಎಂಬ ಮಹದಾಸೆಯಿಂದ ತಾಲೂಕಿನ ಕಣಗಾಲು ಗ್ರಾಮದ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು  ವಿವಾಹಕ್ಕೆ  ಕೇವಲ 15 ವಷ್ಟೇ ಬಾಕಿ ಇತ್ತು ಎನ್ನಲಾಗಿದೆ.

ಈ ಕುರಿತು ಪೊಲೀಸರು ತನಿಖಾ ಕಾರ್ಯ ಆರಂಭಿಸಿದ್ದು, ಮೃತದೇಹದ  ಮರಣೋತ್ತರ ಪರೀಕ್ಷೆ  ನಡೆಸಲಾಗಿದೆ. ಈ ಕುರಿತು ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: