ಮೈಸೂರು

ಡಬಲ್ ಡ್ಯೂಟಿಗೆ ಹೋಗುವಂತೆ ಹೇಳಿದ ಅಧಿಕಾರಿಗೆ ಚಾಲಕನಿಂದ ಆವಾಜ್ : ವಿಡಿಯೋ ವೈರಲ್

ಮೈಸೂರು,ಏ.23:-   ಡಬಲ್ ಡ್ಯೂಟಿಗೆ ಹೋಗುವಂತೆ ಹೇಳಿದ ಅಧಿಕಾರಿಗೆ  ಕೆಎಸ್ ಆರ್ ಟಿಸಿ ಬಸ್ ಚಾಲಕ ಆವಾಜ್ ಹಾಕಿರುವ ಘಟನೆ ನಂಜನಗೂಡು ತಾಲೂಕಿನ ಸಾರಿಗೆ ಬಸ್ ಡಿಪೋನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗಿದೆ.

ಹೈಕೋರ್ಟ್​ ಸೂಚನೆ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟು ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾದ ಬೆನ್ನಲ್ಲೇ ನಂಜನಗೂಡು ತಾಲೂಕು ಘಟಕದ ವ್ಯವಸ್ಥಾಪಕ ಅಧಿಕಾರಿ ಹಾಗೂ ಚಾಲಕನ ನಡುವೆ ನಡೆದ ವಾಕ್ಸಮರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರ್ತವ್ಯ ಮುಗಿಸಿ ಮನೆಗೆ ಹೋಗಲು ಚಾಲಕ ರೆಡಿಯಾಗುತ್ತಿದ್ದಂತೆ ಡಬಲ್ ಡ್ಯೂಟಿ ಮಾಡುವಂತೆ ಘಟಕದ ಅಧಿಕಾರಿ ಹೇಳಿದ್ದು, ಇದಕ್ಕೆ ರೊಚ್ಚಿಗೆದ್ದ ಚಾಲಕ ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.  ಚಾಲಕ ಮತ್ತು ಅಧಿಕಾರಿಗಳ ಮಧ್ಯೆ ನಡೆದ ವಾಕ್ಸಮರವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಹರಿಬಿಟ್ಟಿದ್ದು  ಇದೀಗ ಈ ವಿಡಿಯೋ ವೈರಲ್ ಆಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: