ಮೈಸೂರು

ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ : ಎಂ ಲಕ್ಷ್ಮಣ್ ವಾಗ್ದಾಳಿ

ಮೈಸೂರು. ಏ.23:-  ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಕೆಪಿಸಿಸಿ ವಕ್ತಾರ  ಎಂ ಲಕ್ಷ್ಮಣ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನ ತಾಂಡವ ವಾಡುತ್ತಿದೆ.ಜನರ ಸಮಸ್ಯೆ ಬಗ್ಗೆ ಪರಿಹರಿಸುವ ಸರ್ಕಾರ ಕೆಲಸ ಮಾಡುತ್ತಿಲ್ಲ. ಯಾರೋ ಐಎಎಸ್ ಅಧಿಕಾರಿ ಮಾತು ಕೇಳಿ ಅಧಿಕಾರ ನಡೆಸುತ್ತಿದ್ದೀರಿ.
ಮದ್ಯದ ಅಂಗಡಿಗೆ ಅವಕಾಶ ನೀಡಿ ಸಣ್ಣ ಪುಟ್ಟ ಅಂಗಡಿಗಳನ್ನ ಬಂದ್ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಳೆದ ಅವಧಿಯಲ್ಲಿ ಖರೀದಿಸಿದ್ದ ವೆಂಟಿಲೇಟರ್ ಗಳು ಈಗ ಎಲ್ಲಿದೆ, ಹೇಗೆ ಕಾರ್ಯನಿರ್ವಹಿಸುತ್ತಿದೆ ತಿಳಿಸಿ. ರಾಜ್ಯದಲ್ಲಿ ಎಲ್ಲ ಮಂತ್ರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಸಿಎಂ ಗೆ ಕೆಟ್ಟ ಹೆಸರು ಬರಬೇಕು ಎಂತಲೂ ಸುಮ್ಮನಿರಬೇಕು. ಸಚಿವ ಆರ್.ಅಶೋಕ್, ಈಶ್ವರಪ್ಪ, ಸಿಟಿ ರವಿ, ರೇಣುಕಾಚಾರ್ಯ ಮುಂತಾದವರು ಎಲ್ಲಿದ್ದಾರೆ? ಈ ಬಗ್ಗೆ ಯಾಕೆ ಏನು ಮಾತನಾಡುತ್ತಿಲ್ಲ,
ಇದನ್ನೆಲ್ಲ ಪ್ರಶ್ನಿಸಿದ್ರೆ ನನಗೆ ಸಚಿವ ಆರ್. ಅಶೋಕ್ ನೋಟಿಸ್ ಕೊಡ್ತಾರಾ, ಇಂತಹ 100 ನೋಟಿಸ್ ಬಂದರೂ ನಾನು ಹೆದುರುವುದಿಲ್ಲ. ಬೆಂಗಳೂರಿ ನಲ್ಲಿ ನೀವು ನಿಮ್ಮ ತಮ್ಮ ಸೇರಿಕೊಂಡು ಏನೇನು ಕೆಲಸ ಮಾಡಿದ್ದೀರಿ ಎಂದು ಮುಂದೆ ತಿಳಿಸುತ್ತೇನೆಎಂದು ಹರಿಹಾಯ್ದರು.

ಸಣ್ಣ ಸಣ್ಣ ವಿಚಾರಕ್ಕೆಲ್ಲ ಡಂಗೂರ ಬಾರಿಸುತ್ತಿದ್ದ ಆರ್.ಎಸ್.ಎಸ್ ನವರು ಎಲ್ಲಿದ್ದಾರೆ.? ಬಹುಶ ಪಕ್ಷದಿಂದಲೇ ಸೂಚನೆ ಸಿಕ್ಕಿರ ಬೇಕು ಅದಕ್ಕೆ ಎಲ್ಲರೂ ಸುಮ್ಮನಿದ್ದಾರೆ.
ಕೊರೊನ ಸಂಕಷ್ಟದಲ್ಲಿ ಜನ ಇಷ್ಟೆಲ್ಲ ಕಷ್ಟ ಪಡುತ್ತಿದ್ದಾರೆ.
ಆದರೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿ.ಎಲ್ ಸಂತೋಷ್, ಸಿಟಿ ರವಿ ಮುಂತಾದವರೆಲ್ಲ ಸುಮ್ಮನಾಗಿಬಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪಕ್ಷದವರೆ ನೋಟಿಸ್ ಕೊಟ್ಟಿರಬೇಕು ಅದಕ್ಕೆ ಎಲ್ಲರೂ ಸುಮ್ಮನಿದ್ದಾರೆ ಅನ್ಸತ್ತೆ ಎಂದು ವ್ಯಂಗ್ಯ ವಾಡಿದರು. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಹುಚ್ಚರ ದರ್ಬಾರ್ ಆಗಿದೆ  ಎಂ ದು ವಾಗ್ದಾಳಿ ನ ಡೆ ಸಿದರು.

ಗೈಡ್‌ಲೈನ್ಸ್ ಬಗ್ಗೆ ಸಾಕಷ್ಟು ಗೊಂದಲ ವಿದೆ. ಪೊಲೀಸರು ಗನ್ ಪಾಯಿಂಟ್‌ನಲ್ಲಿ ಅಂಗಡಿ ಮುಚ್ಚಿಸಿದರು.ಸರ್ಕಾರ ನಡೆಸಲು ಬರದಿದ್ದರೆ ಬಿಟ್ಟು ಹಾಳಾಗಿ ಹೋಗಿ ಇದ್ದಕ್ಕಿದ್ದಂತೆ ಬಂದ್ ಮಾಡಿಸಿದರೆ ಜನರಿಗೆ ಸಮಸ್ಯೆ  ಆಗಲಿದೆ. ಸರ್ಕಾರಕ್ಕೆ ಬೇಸಿಕ್ ಕಾಮನ್ ಸೆನ್ಸ್  ಕೂ ಡ ಇಲ್ಲ. ತಲೆ ಕೆಟ್ಟೋಗಿದೆಯಾ ನಿಮಗೆ ? ನಿಮಗೆ ಬದ್ದತೆ ಇಲ್ಲ ಇದು ತುಘಲಕ್ ದರ್ಬಾರ್
ಬೆಳಗ್ಗೆ ಮಧ್ಯಾಹ್ನ ಸಂಜೆ ಒಂದು ಆದೇಶದಿಂದ ಜನರನ್ನು ಸಾಯಿಸುತ್ತಿದ್ದೀರಾ, ಮದ್ಯದ ಅಂಗಡಿಗೆ ಅವಕಾಶ ಮಧ್ಯಮ ವರ್ಗದವರಿಗೆ ಬರೆ. ಮದ್ಯದ ಅಂಗಡಿಗೆ ಕೊರೊನಾ ಹೋಗಲ್ವಾ ? ಮರ್ಡರ್ ಮಾಡುವ ಸರ್ಕಾರ ಇದು ಅಂತಿದ್ದಾರೆ ಜನರು. ಬೆಡ್ ಇಲ್ಲ ವೆಂಟಿಲೇಟರ್ ಇಲ್ಲ ನಿಮ್ಮ ಬಳಿ ಕಳೆದ ಬಾರಿ ಖರೀದಿ ಮಾಡಿದ ವಸ್ತುಗಳು ಎಲ್ಲಿ ?
ಇದರ ಲೆಕ್ಕ ಕೊಡಿ ಮೊದಲು ವೆಂಟಿಲೇಟ್ ಆಕ್ಸಿಜನ್ ಲೆಕ್ಕ ಕೊಡಿ ಎಂದು ಗರಂ ಆದರು.
ವಿಶ್ವನಾಥ್ ಎಷ್ಟೋ ದಿನಗಳ ಬಳಿಕ ಮೇಲೆ ಒಂದು ಸತ್ಯ ಹೇಳಿದ್ದಾರೆ. ಅವರದೇ ಪಕ್ಷದ ನಾಯಕರ ವಿರುದ್ಧ ಅಸಮಾಧನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯದ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್ . ವಿಶ್ವನಾಥ್ ಹೇಳ್ತಿದ್ದಾರೆ. ಈ ಮೂಲಕ ಎಷ್ಟೋ ದಿನಗಳ ಬಳಿಕ ವಿಶ್ವನಾಥ್ ಸತ್ಯ ಹೇಳಿದ್ದಾರೆ . ಒಂದೆಡೆ ದೇಶವೇ ಕೊರೊನದಲ್ಲಿ ನಲುಗುತ್ತಿದರೆ ಇತ್ತ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ವರ್ಚುಲ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಈ ವೇಳೆ ಇದೆಲ್ಲ ಬೇಕಿತ್ತ? ಜನರ ರಕ್ಷಣೆಗಿಂತ ಚುನಾವಣೆ ಮುಖ್ಯ ವಾಯ್ತಾ  ಎಂದು ವಾಗ್ದಾಳಿ ನಡೆಸಿದರು.

ಸುಧಾಕರ್ ಅವರಿಗೆ ಮಾಧ್ಯಮ ಪ್ರಚಾರದ ಹುಚ್ಚು ರೆಮಿಡಿಸಿವಿರ್ ಕೊರೊನಾಗೆ ಪರಿಣಾಮಕಾರಿಯಲ್ಲ ಸಚಿವ ಸುಧಾಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ರೆಮಿಡಿಸಿವಿರ್ ಬೆಸ್ಟ್ ಇಂಜೆಕ್ಷನ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉತ್ತಮ ಅಂತ ಹೇಳಿದೆ
ಸುಧಾಕರ್ ಸೆರಾಯಿಡ್ ಇದಕ್ಕಿಂತ ಉತ್ತಮ ಅಂತ ಹೇಳುತ್ತಾರೆ. ಸುಧಾಕರ್ ಅವರಿಗೆ ಸೆರಾಯಿಡ್ ಕಂಪನಿಯವರು ದುಡ್ಡು ಕೊಟ್ಟಿದ್ದಾರಾ?  ಮೈಸೂರು ಡಿಸಿಯನ್ನು ಮುಂದಿನ ಸಿಎಂ ಮಾಡುವುದು ಒಳ್ಳೆಯದು. ಅವರು ಏನು ಹೇಳುತ್ತಾರೆ ಅದನ್ನು‌ ಮಂತ್ರಿಗಳು ಮಾಡುತ್ತಿದ್ದಾರೆ ಸುಧಾಕರ್ ಸಹ ಡಿಸಿ ಮಾತನ್ನು ಕೇಳುತ್ತಾರೆ ಪ್ರಧಾನಿ ಭಾಷಣ ವಿಚಾರ ನಾವು ಪ್ಯಾಕೇಜ್ ನಿರೀಕ್ಷೆಯಲ್ಲಿದ್ದೆವು. ಆದರೆ ಮನೆಯಲ್ಲಿರಿ ಮಾಸ್ಕ್ ಹಾಕ್ಕೊಳ್ಳಿ ಅಂತ ಹೇಳಿ ಹೋದರು. ಬೆಂಗಳೂರು ಸಾವಿನೂರಾಗಿದೆ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಸಾವಿನ ಕುರಿತು ಸರ್ಕಾರ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ ಎಂದು ಹರಿಹಾಯ್ದರು.
ಸಿಎಂ ಬಿ ಎಸ್ ಯಡಿಯೂರಪ್ಪಗೆ ಕೊರೊನಾ ವಿಚಾರ ಕ್ಕೆ ಪ್ರತಿಕ್ರಿಯಿಸಿ ಕೇವಲ 5 ದಿನದಲ್ಲಿ ಸಿಎಂ ವಾಪಸ್ಸು ಬಂದಿದ್ದಾರೆ. ಅವರಿಗೆ ಕೊರೊನಾ ಬಂದಿತ್ತಾ ಇಲ್ವಾ ? . ನನಗೂ ಕೊರೊನಾ ಬಂದಿತ್ತು 15 ದಿನ ಚಿಕಿತ್ಸೆಯಲ್ಲಿದ್ದೆ. ಯಡಿಯೂರಪ್ಪ ಎಲ್ಲಾ ಕಡೆ ಓಡಾಡಿ ಅಂಟಿಸಿದ್ದಾರೆ. ಶಾಸಕ ಎಸ್ ಎ ರಾಮದಾಸ್ ಸಹಾ ಇದೇ ರೀತಿ ಮಾಡಿದ್ದಾರೆ ಬಿಜೆಪಿಯವರದ್ದು ಸ್ಯಾಡಿಸ್ಟ್ ಮನೋಭಾವನಾ ? ನಮಗೆ ಬಂದಿದೆ ಎಲ್ಲರಿಗೂ ಬರಲಿ ಅನ್ನೋ ಮನೋಭಾವನಾ ಎಂದು  ಗಂಭೀರ ಆರೋಪ ಮಾಡಿದರು.
ಸರ್ಕಾರದ ವಿಫಲತೆ ಬಗ್ಗೆ ಎಲ್ಲಾ‌ ಕಡೆ ಛೀಮಾರಿ ಹಾಕಲಾಗುತ್ತಿದೆ. ತಮ್ಮ ಪಕ್ಷದ ವಿಶ್ವನಾಥ್ ಅವರೇ ಸರ್ಕಾರವನ್ನು ಜಾಡಿಸಿದ್ದಾರೆ
ಇನ್ನಾದರೂ ಸರ್ಕಾರ ಜನರ ನೋವಿಗೆ ಸ್ಪಂದಿಸಲಿ. ಪಿಎಂ ಕೇರ್ ಫಂಡ್ ಮಾಹಿತಿ ಕೊಡಿ ಅದು ಏನಾಯ್ತು ? ಪಶ್ಚಿಮ ಬಂಗಾಳ ಚುನಾವಣೆಗೆ ಬಳಕೆಯಾಗುತ್ತಿದೆಯಾ ? ಸಿಎಂ ಕೇರ್ ಫಂಡ್ ಏನಾಯ್ತು ಅದನ್ನಾದರೂ ಲೆಕ್ಕ ಕೊಡಿ ? ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: