ಮೈಸೂರು

ಇಂದು ಸಂಜೆ ಯಿಂದಲೇ ವೀಕೆಂಡ್ ಕರ್ಫ್ಯೂ ಆರಂಭ : ಎಲ್ಲೆಡೆ ಪೊಲೀಸರ ಹದ್ದಿನ ಕಣ್ಣು

ಮೈಸೂರು,ಏ.23:-  ಇಂದು ಸಂಜೆ ಯಿಂದಲೇ ವೀಕೆಂಡ್ ಕರ್ಫ್ಯೂ ಆರಂಭವಾಗಲಿದೆ.  ಇಂದು ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಪೊಲೀಸರು ಎಲ್ಲೆಡೆ ಹದ್ದಿನಕಣ್ಣಿರಿಸಿದ್ದಾರೆ.

ನಗರ ಪೊಲೀಸರು ಈಗಾಗಲೇ ವೀಕೆಂಡ್ ಮತ್ತು ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.   ಔಷಧಿ, ತರಕಾರಿ , ಹಣ್ಣು ಹಂಪಲು, ಮೀನು ಮಾಂಸ ಮಾರಾಟಕ್ಕೆ ಮಾತ್ರ ಸಮಯ ನಿಗದಿಪಡಿಸಲಾಗಿದೆ. ಶನಿವಾರ-ಭಾನುವಾರ ಬೆಳಿಗ್ಗೆ 6ರಿಂದ 10ಗಂಟೆಯ ವರಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಅನಗತ್ಯವಾಗಿ ಓಡಾಡುವವರಿಗೆ ಬೀಳಲಿದೆ   ಗುನ್ನ ಬೀಳಲಿದೆ. ಈಗಾಗಲೇ ಅನಗತ್ಯವಾಗಿ ಅಂಗಡಿ-ಮುಂಗಟ್ಟು ತೆರೆದವರಿಗೆ   ಪೊಲೀಸರು ಶಾಕ್ ನೀಡುತ್ತಿದ್ದಾರೆ. ಮೈಸೂರು ನಗರ ಬಹುತೇಕ ನಿನ್ನೆಯಿಂದಲೇ  ಸ್ತಬ್ಧವಾಗಿದೆ.

ಏತನ್ಮಧ್ಯೆ  30ಮಂದಿ ಮೇಲೆ  ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು. ಮೈಸೂರು ನಗರದಲ್ಲೇ 30 ಕ್ರಿಮಿನಲ್ ಪ್ರಕರಣಗಳು ದಾಖಲಿಸಲಾಗಿದೆ. ಕಳೆದ ಒಂದು ವಾರದಲ್ಲಿ 30 ಪ್ರಕರಣ ದಾಖಲಿಸಲಾಗಿದ್ದು,   ಹೋಟೆಲ್, ಜ್ಯುವೆಲ್ಲರಿ ಶಾಪ್, ಗಾರ್ಮೆಂಟ್ಸ್ ಸೇರಿದಂತೆ ಹಲವೆಡೆ ಕೊರೋನಾ  ನಿಯಮ ಉಲ್ಲಂಘನೆ ಯಾಗಿದೆ. ಈ ಹಿನ್ನೆಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: