ಕರ್ನಾಟಕಪ್ರಮುಖ ಸುದ್ದಿ

ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಉಮೇಶ್ : ಕೊರೊನಾ ಜಾಗೃತಿ ವಹಿಸುವಂತೆ ಸೂಚನೆ

ರಾಜ್ಯ, (ಚಾಮರಾಜನಗರ ) ಏ.23: -ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿಯ ಮಲಾರ ಪಾಳ್ಯದ ಹೊಸಕೆರೆ ಮತ್ತು ವಡಗೆರೆ ಗ್ರಾಮದ ಬಸವರಾಜ ಕಟ್ಟೆಯಲ್ಲಿ ನರೇಗಾ ಯೋಜನೆಯಡಿ ಹಮ್ಮಿಕೊಂಡಿರುವ ದುಡಿಯೋಣ ಬಾ ಹಾಗೂ ಜಲ ಶಕ್ತಿ ಅಭಿಯಾನದ ಅಂಗವಾಗಿ ಪ್ರಾರಂಭಿಸಿರುವ ಹೂಳೆತ್ತುವ ಕಾಮಗಾರಿಯನ್ನು  ಕಾರ್ಯ ನಿರ್ವಾಹಕಾಧಿಕಾರಿಗಳಾದ ಉಮೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ನಂತರ ಕೂಲಿಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಪ್ರತಿ ಕುಟುಂಬಕ್ಕೆ 100 ದಿನಗಳ ಕೆಲಸ ದೊರೆಯಲಿದ್ದು, ಪ್ರತಿ ದಿನಕ್ಕೆ 289ರೂ ಕೂಲಿ ನೀಡಲಾಗುತ್ತಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಸೋಕ್ ಪಿಟ್, ಕೊಟ್ಟಿಗೆ,ಆಡಿನ ಶೆಡ್, ಬದು ನಿರ್ಮಾಣ ಹಾಗೂ ಜಮೀನಿನಲ್ಲಿ ಸಸಿ ನೆಡಲು ಹೀಗೆ ಇತ್ಯಾದಿ ನರೇಗಾ ಕಾಮಗಾರಿಗಳ ಬಗ್ಗೆ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ
ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತರಾಗಿರುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಆದಿಶೇಷ ಮತ್ತು ಕಾಯಕ ಬಂಧು ಅವರು ಹಾಜರಿದ್ದರು.

Leave a Reply

comments

Related Articles

error: