ದೇಶಪ್ರಮುಖ ಸುದ್ದಿವಿದೇಶ

ಮಂಡ್ಯ ಮೂಲದ ಸರ್ಜನ್‌ ಜನರಲ್‌ ವಿವೇಕ್ ರಾಜೀನಾಮೆ ಪಡೆದ ಟ್ರಂಪ್ ಆಡಳಿತ

ವಾಷಿಂಗ್ಟನ್ : ಟ್ರಂಪ್ ಆಡಳಿತವು ಯುಎಸ್ ಸಾರ್ವಜನಿಕ ಸರ್ಜನ್ ಜನರಲ್ ಆಗಿದ್ದ ಮಂಡ್ಯ ಮೂಲದ ಡಾ.ವಿವೇಕ್ ಹಲ್ಲೇಗೆರೆ ಮೂರ್ತಿ ಅವರ ರಾಜೀನಾಮೆ ಪಡೆದಿದೆ.

ಈ ಹಿಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ಆಯ್ಕೆ ಮಾಡಿದ್ದರು. ಆದರೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಹುದ್ದೆ ತ್ಯಜಿಸುವಂತೆ ವಿವೇಕ್ ಅವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಇಂದು ರಾಜಿನಾಮೆ ನೀಡಿದ್ದಾರೆ.

ಅಮೆರಿಕ ಸಾರ್ವಜನಿಕ ಆರೋಗ್ಯ ಸೇವೆ ಆಯೋಗದ ಮುಖ್ಯಸ್ಥರ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ವಿವೇಕ್ ಮೂರ್ತಿಗೆ ಸೂಚಿಸಲಾಗಿದೆ ಎಂದು ನಿನ್ನೆ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಮೂರ್ತಿ ಅವರನ್ನು ಸರ್ಜನ್ ಜನರಲ್ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದ್ದು, ಆಯೋಗದ ಸದಸ್ಯರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಆಪ್ತ ಸರ್ಜನ್ ಜನರಲ್’ ಆಗಿಯೂ ವಿವೇಕ್ ನಿಯೋಜಿತರಾಗಿದ್ದರು.

Leave a Reply

comments

Related Articles

error: