ಮೈಸೂರು

“ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್” ಚಲನಚಿತ್ರಕ್ಕೆ ಉತ್ತಮ ಧಾರ್ಮಿಕ ಚಿತ್ರ” ಪ್ರಶಸ್ತಿ

ಮೈಸೂರು,ಏ.23:- ಜೆಎಸ್‍ ಎಸ್ ಮಹಾವಿದ್ಯಾಪೀಠದಿಂದ ನಿರ್ಮಾಣಗೊಂಡು, ಮೈಸೂರಿನ ಶೂನ್ಯೇಕ ಸಲೂಷನ್ಸ್ ಅನಿಮೇಷನ್ಸ್ ಸಂಸ್ಥೆಯು ಸಿದ್ಧಪಡಿಸಿದ ಇಂಗ್ಲಿಷ್ ಭಾಷೆಯ ಅನಿಮೇಷನ್ ಚಿತ್ರ “ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್” ಚಲನಚಿತ್ರಕ್ಕೆ ಜನವರಿ 2021 ರಲ್ಲಿ ನಡೆದ ಪ್ರಸಕ್ತ ಸಾಲಿನ ವೈಟ್ ಯೂನಿಕಾರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಉತ್ತಮ ಧಾರ್ಮಿಕ ಚಿತ್ರ” ಪ್ರಶಸ್ತಿ ದೊರೆತಿದೆ

ಈ ಅನಿಮೇಷನ್ ಚಲನಚಿತ್ರದ ನಿರ್ದೇಶಕರಾದ ಶ್ರೀ ಅಬ್ದುಲ್ ಕರೀಮ್‍ರು `ಉತ್ತಮ ನಿರ್ದೇಶಕ’ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ. ಈ ಚಲನಚಿತ್ರೋತ್ಸವಕ್ಕೆ ಒಟ್ಟು 800 ಚಿತ್ರಗಳು ಬಂದಿದ್ದು, ಅಂತಿಮ ಸುತ್ತಿಗೆ ನೂರಕ್ಕೂ ಹೆಚ್ಚು ಚಿತ್ರಗಳು ಆಯ್ಕೆಯಾಗಿದ್ದವು.
ವೈಟ್ ಯೂನಿಕಾರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಕೊಲ್ಕತ್ತಾದ ಫಿಲ್ಮ್ ಪಾರ್ಟ್‍ ನರ್ಸ್ ಸ್ಟುಡಿಯೋಸ್ (ಎಫ್‍ಪಿಎಸ್) ಸಹಭಾಗಿತ್ವದೊಡನೆ ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸುತ್ತ ಬಂದಿದೆ. ಈ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಎಲ್ಲ ಬಗೆಯ, ಎಲ್ಲ ಭಾಷೆಯ, ಎಲ್ಲ ಪ್ರಕಾರದ ಚಲನಚಿತ್ರಗಳನ್ನು ಪರಿಗಣಿಸುವುದರೊಂದಿಗೆ ದೇಶೀ ಸಿನಿಮಾಗಳಿಗೆ ಉತ್ತೇಜನ ನೀಡುತ್ತದೆ.
`ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’ ಅನಿಮೇಶನ್ ಚಿತ್ರವು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪದ ಫಲವಾಗಿದೆ. ಇದು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಇತಿಹಾಸ ಹಾಗೂ ಗುರುಪರಂಪರೆಯ ಸೇವಾಕೈಂಕರ್ಯಗಳನ್ನು ಅರ್ಥಪೂರ್ಣವಾಗಿ ಚಿತ್ರಿಸಿರುವ ಒಂದು ಅಪೂರ್ವ ಪ್ರಯತ್ನ. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು, ರಾಜಗುರುತಿಲಕ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಮತ್ತು ಇದೇ ಪರಂಪರೆಯ ಇತರ ಜಗದ್ಗುರುಗಳಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: