ಕರ್ನಾಟಕಪ್ರಮುಖ ಸುದ್ದಿ

ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಟ ನಡೆಸಿದ ಸಾಲುಮರದ ತಿಮ್ಮಕ್ಕ

ರಾಜ್ಯ( ಬೆಂಗಳೂರು)ಏ.24:- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ಅಪೋಲೋ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಟ ನಡೆಸಿದ ಘಟನೆ ವರದಿಯಾಗಿದೆ.

ಅವರು ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಅಪೋಲೋ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆ ತುಂಬಾ ಕೊರೋನಾ ರೋಗಿಗಳು ತುಂಬಿ ಹೋಗಿರುವುದರಿಂದ ನಾನ್ ಕೋವಿಡ್ ರೋಗಿಗಳಿಗೆ ಹಾಸಿಗೆ ಸಮಸ್ಯೆ ಎದುರಾಗಿದೆ. ಸಾಲುಮರದ ತಿಮ್ಮಕ್ಕ ಸಹ ಹಾಸಿಗೆಗಾಗಿ ಎರಡು ಗಂಟೆಗಳ ಕಾಲ ಪರದಾಟ ನಡೆಸಬೇಕಾಯಿತು. ತಿಮ್ಮಕ್ಕ ಅವರಿಗೆ ಬೆಡ್ ಹೊಂದಿಸಲು ವೈದ್ಯರು ಸಹ ಪ್ರಯತ್ನ ನಡೆಸಿದ್ದರು. ನಂತರ ಅವರಿಗೆ ಹಾಸಿಗೆ ಹೊಂದಿಸಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ಬಚ್ಚಲುಮನೆಯಲ್ಲಿ ಬಿದ್ದು ಬೆನ್ನುಮೂಳೆ ಮುರಿತವಾಗಿದ್ದ ತಿಮ್ಮಕ್ಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಅದೇ ಜಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

comments

Related Articles

error: