ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ದಸರಾ ಉದ್ಘಾಟನೆಗೆ ಕ್ಷಣಗಣನೆ

chamundi-webಮೈಸೂರು ದಸರಾ ಉತ್ಸವ ಪ್ರಯುಕ್ತ ನಗರವೆಲ್ಲ ಕಳೆಗಟ್ಟಿದೆ. ಚಾಮುಂಡಿ ಬೆಟ್ಟದಲ್ಲಿ ಹನ್ನೊಂದು ದಿನಗಳ ಕಾಲ ನಡೆಯುವ ದಸರಾ ಉತ್ಸವಕ್ಕೆ ಇನ್ನು ಕೆಲವೇ ಕ್ಷಣಗಳಲ್ಲಿ ನಾಡೋಜ ಚನ್ನವೀರ ಕಣವಿಯವರು ಉದ್ಘಾಟನೆ ನೆರವೇರಿಸಲಿದ್ದು ಅಧಿಕೃತ ಚಾಲನೆ ದೊರಕಲಿದೆ.

ಈಗಾಗಲೇ ಉದ್ಘಾಟನೆ ನೋಡಲು ಹಲವಾರು ಮಂದಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ.  ಪೂರ್ಣಕುಂಭವನ್ನು ತಮ್ಮ ತಲೆಯ ಮೇಲೆ ಹೊತ್ತ ವನಿತೆಯರು, ನಂದಿಕೋಲು, ವೀರಗಾಸೆ, ಕಂಸಾಳೆ ಪುಜಾಕುಣಿತದ ಮೂಲಕ  ಅತಿಥಿಗಳನ್ನು ಸ್ವಾಗತಿಸಲಾಗುತ್ತಿದೆ.

ಕೊಡಗು ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಉದ್ಘಾಟನೆಯನ್ನು ನೋಡಲು ತಮ್ಮ ಮಗಳನ್ನು ಕರೆತಂದಿದ್ದು ಗಮನ ಸೆಳೆದರು.

Leave a Reply

comments

Related Articles

error: