ಮೈಸೂರು

ಖಾಲಿಯಿರುವ ನಿವೇಶನಗಳನ್ನು ಸ್ವಚ್ಛಗೊಳಿಸಿ ಗಿಡಗಂಟಿ ತೆರವುಗೊಳಿಸಲು ಪ್ರಸ್ತುತ ವಿಧಿಸುತ್ತಿರುವ ದರದಲ್ಲೇ ಸ್ವಚ್ಛತಾ ಶುಲ್ಕ ವಿಧಿಸಲು ತೀರ್ಮಾನ : ಹೆಚ್.ವಿ.ರಾಜೀವ್

ಮೈಸೂರು,ಏ.24:- ಪ್ರಾಧಿಕಾರದ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಹಾಗೂ ಖಾಸಗಿಯವರು ನಿರ್ಮಿಸಿರುವ ಬಡಾವಣೆಯಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ಬಡಾವಣೆಯ ಹಾಗೂ ನಗರದ ಸೌಂದರ್ಯ ಹಾಳಾಗುತ್ತಿರುವುದರ ಜೊತೆಗೆ ನೈರ್ಮಲ್ಯವು ಸಹ ಹದಗೆಡುತ್ತಿರುತ್ತದೆ.

ಈ ಸಂಬಂಧ ಸಾರ್ವಜನಿಕರು ಅನೇಕ ಸಂದರ್ಭಗಳಲ್ಲಿ ಖಾಲಿಯಿರುವ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಮೇಲಿಂದ ಮೇಲೆ ದೂರು ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪ್ರಾಧಿಕಾರದ ಸಭೆಯಲ್ಲಿ ವಿಷಯದ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ವಾರ್ಷಿಕ ಎರಡು ಬಾರಿ ಖಾಲಿಯಿರುವ ನಿವೇಶನಗಳನ್ನು ಸ್ವಚ್ಛಗೊಳಿಸಿ ಗಿಡಗಂಟಿಗಳನ್ನು ತೆರವುಗೊಳಿಸಲು ಹಾಗೂ ತಗಲುವ ವೆಚ್ಚವನ್ನು ಮೈಸೂರು ಮಹಾನಗರ ಪಾಲಿಕೆಯು ಇತ್ತೀಚೆಗೆ ವಿಧಿಸುತ್ತಿರುವ ದರದಲ್ಲೇ ಸ್ವಚ್ಛತಾ ಶುಲ್ಕವನ್ನು ವಿಧಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು   ಯಾವುದೇ ಖಾಸಗಿ ಅಭಿವೃದ್ಧಿದಾರರು ಅಥವಾ ಬಡಾವಣೆ ಅಭಿವೃದ್ಧಿಪಡಿಸಿದ ಗೃಹ ನಿರ್ಮಾಣ ಸಂಘದ ಆಡಳಿತ ಮಂಡಳಿಯವರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುತ್ತಿದ್ದಲ್ಲಿ ಗೃಹ ನಿರ್ಮಾಣ ಸಹಕಾರಿ ಸಂಘದ ಆಡಳಿತ ಮಂಡಳಿ/ಬಡಾವಣೆಯ ಅಭಿವೃದ್ಧಿದಾರರು ಪ್ರಾಧಿಕಾರಕ್ಕೆ ಈ ಸಂಬಂಧ ಖಾಲಿ ನಿವೇಶನಗಳನ್ನು ವಾರ್ಷಿಕ ಎರಡು ಬಾರಿ (ಸೆಪ್ಟೆಂಬರ್ ನಲ್ಲಿ ಹಾಗೂ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ)ಸ್ವಚ್ಛತೆಗೊಳಿಸುವ ಬಗ್ಗೆ ದೃಢೀಕರಣ ಸಲ್ಲಿಸಿದಲ್ಲಿ ಅಂತಹ ಎಲ್ಲಾ ನಿವೇಶನಗಳಿಗೆ ಸ್ವಚ್ಛತಾ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗುವುದು ಎಂದಿದ್ದಾರೆ.

ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿರುವ ಖೇಲಿ ನಿವೇಶನದ ಮಾಲೀಕರುಗಳು ಕಂದಾಯ ಪಾವತಿಸುವ ಸಂದರ್ಭದಲ್ಲಿ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿ ಗಿಂಡಗಂಟಿಗಳನ್ನು ತೆರವುಗೊಳಿಸಿ ನೈರ್ಮಲ್ಯದಿಂದ ಇರಿಸಿಕೊಳ್ಳುವುದಾಗಿ ಘೋಷಣಾ ಪತ್ರ ನೀಡಿದಲ್ಲಿ ಕಂದಾಯ ಪಾವತಿ ಸಂದರ್ಭದಲ್ಲಿ ಸ್ವಚ್ಛತಾ ಶುಲ್ಕ ಪಾವತಿಗೆ ವಿನಾಯತಿ ನೀಡಲಾಗುವುದು ಎಂದಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಿವೇಶನದಾರರುಗಳಿಗೆ ಸೇರಿದ ಖಾಲಿ ನಿವೇಶನವನ್ನು ಸ್ವತಃ ನಿವೇಶನದಾರರುಗಳು ಸ್ವಚ್ಛ ಮಾಡಿ ಸ್ವಚ್ಛ ಮಾಡಿರುವ ಬಗ್ಗೆ ಛಾಯಾ ಚಿತ್ರದೊಂದಿಗೆ ಕಂದಾಯ ಪಾವತಿಸುವ ಸಂದರ್ಭದಲ್ಲಿ ದೃಢೀಕರಣದೊಂದಿಗೆ ನಿನಂತಿಸಿದಲ್ಲಿ ಸ್ವಚ್ಛತಾ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗುವುದು ಎಂದಿದ್ದಾರೆ.

ಪ್ರಾಧಿಕಾರದಿಂದ ಸಂಗ್ರಹಿಸಲಾಗುವ ಸ್ವಚ್ಛತಾ ಶುಲ್ಕವನ್ನು ಉಪಯೋಗಿಸಿ ವಾರ್ಷಿಕವಾಗಿ ಸೆಪ್ಟೆಂಬರ್ ಮಾಹೆಯಲ್ಲಿ ಒಂದು ಬಾರಿ ಹಾಗೂ ಜನವರಿ-ಫೆಬ್ರವರಿ ಮಾಹೆಯಲ್ಲಿ ಒಂದು ಬಾರಿಯಂತೆ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ. ಪ್ರಾಧಿಕಾರದಿಂದ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಪ್ರಾಧಿಕಾರದಿಂದ ಸೆಪ್ಟೆಂಬರ್ ಮಾಹೆಯಲ್ಲಿ ಸ್ವಚ್ಛತೆ ದೃಢೀಕರಣ ಸಲ್ಲಿಸಿರುವ ನಿವೇಶನಗಳಲ್ಲಿ ಸ್ವಚ್ಛತೆ ಆಗಿರುವ/ಆಗದಿರುವ  ಬಗ್ಗೆ ಸರ್ವೆ ಕಾರ್ಯ ನಡೆಸಿ ಸ್ವಚ್ಛ ಮಾಡಿಸದಿರುವ ನಿವೇಶನದಾರರುಗಳಿಗೆ ಸ್ವಚ್ಛತಾ ಶುಲ್ಕವನ್ನು ಬಾಕಿ ಕಂದಾಯವೆಂದು ಪರಿಗಣಿಸಿ ಮುಂದಿನ ಸಾಲಿನ ಕಂದಾಯದ ಜೊತೆಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: