ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಈ ವಾರವೂ ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ದರ್ಶನವಿಲ್ಲ: ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು,ಏ.24-ಅನಾರೋಗ್ಯ ಕಾರಣದಿಂದಾಗಿ ನಟ ಕಿಚ್ಚ ಸುದೀಪ್ ಕಳೆದ ವಾರ ಬಿಗ್ ಬಾಸ್ ಶೋ ನಡೆಸಿಕೊಟ್ಟಿರಲಿಲ್ಲ. ಕಳೆದ ವಾರ ಸುದೀಪ್ ಅವರನ್ನು ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು ಈ ವಾರ ಸುದೀಪ್ ಅವರನ್ನು ನೋಡಬಹುದು ಎಂದುಕೊಂಡಿದ್ದರು. ಆದರೆ ಈ ವಾರವೂ ಅಭಿಮಾನಿಗಳಿಗೆ ನಿರಾಸೆಯಾಗಲಿದೆ.

ಏಕೆಂದರೆ ಸುದೀಪ್ ಅವರು ಈ ವಾರವೂ ಬಿಗ್ ಬಾಸ್ ಶೋ ನಡೆಸಿಕೊಡುತ್ತಿಲ್ಲ. ಎರಡು ವಾರಗಳಿಂದ ಸುದೀಪ್ ಅವರನ್ನು ನೋಡದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆಯಾಗಿದೆ. ಈ ವಾರವೂ ಬಿಗ್ ಬಾಸ್ ಶೋ ನಡೆಸಿಕೊಡದಿರುವ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಈ ವಾರವೂ ಬಿಗ್ ಬಾಸ್ ವೀಕೆಂಡ್‌ ಎಪಿಸೋಡ್‌ಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ವೇದಿಕೆ ಹತ್ತಿ ಅದಕ್ಕೆ ನ್ಯಾಯ ಸಲ್ಲಿಸಲು ನನಗೆ ಇನ್ನೊಂದಿಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಸುದೀಪ್‌ ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದು, ಆದಷ್ಟು ಬೇಗ ಸುದೀಪ್‌ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಪತ್ನಿ ಪ್ರಿಯಾ ಸುದೀಪ್‌ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಸುದೀಪ್‌ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿರುವುದರಿಂದ, ಜೊತೆಗೆ ವೈದ್ಯರು ಕೂಡ ಎರಡು ವಾರಗಳ ಕಾಲ ಸುದೀಪ್‌ ಅವರಿಗೆ ವಿಶ್ರಾಂತಿಗೆ ಸೂಚಿಸಿರುವುದರಿಂದ, ಸುದೀಪ್‌ ಈ ವಾರ ಕೂಡ ತಮ್ಮ ಕಿರುತೆರೆ ಕಾರ್ಯಕ್ರಮದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಈ ವಾರ ಕೂಡ ಕಿರುತೆರೆಯಲ್ಲಿ ಕಿಚ್ಚನ ದರ್ಶನ ಆಗುತ್ತಿಲ್ಲ. (ಎಂ.ಎನ್)

Leave a Reply

comments

Related Articles

error: