ಮೈಸೂರು

ಸುಂದರ ಸಮಾಜವಿದ್ದರೆ ಮಾತ್ರ ಬದುಕು ಸುಂದರ : ಸಚಿವ ತನ್ವೀರ್ ಸೇಠ್

ಇಂದು ಪ್ರತಿಯೊಬ್ಬರೂ ಸಮಾಜದಿಂದ ಪಡೆದುಕೊಳ್ಳುವುದನ್ನೇ ನೋಡುತ್ತಾರೆ. ಯಾರೂ ಸಹ ಮರಳಿ ಸಮಾಜಕ್ಕೆ ನೀಡುವ ಕೆಲಸ ಮಾಡುವುದೇ ಇಲ್ಲ. ಸುಂದರ ಸಮಾಜವಿದ್ದರೆ ಮಾತ್ರ ಬದುಕು ಸುಂದರವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರು ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವಿಲ್ಲದೇ ಮನುಷ್ಯ ಬದುಕಿರಲಾರ ಸಮಾಜದ ನಡುವೆ ಮನುಷ್ಯನಿಗೆ ಅವಿನಾಭಾವ ಸಂಬಂಧವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಮನುಷ್ಯರು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಸಮಾಜದಿಂದ ಎಲ್ಲವನ್ನು ಪಡೆದುಕೊಂಡು ಸಮಾಜವನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ನಮ್ಮ ಏಳಿಗೆಗೆ ಕಾರಣವಾದ ಸಮಾಜಕ್ಕೆ ಏನನ್ನಾದರು ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ವಿದ್ಯಾವರ್ಧಕ ಸಂಘದ ಸೆಕ್ರೆಟರಿ ಪಿ.ವಿಶ್ವನಾಥ್,  ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಶಿವಲಿಂಗೇಗೌಡ, ಎಸ್.ಎನ್ ಲಕ್ಷ್ಮೀನಾರಾಯಣ್ , ಪ್ರೊ..ಹೆಚ್.ಕೆಶಿವರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: