ದೇಶಪ್ರಮುಖ ಸುದ್ದಿ

ಸಂಸದರ ನಿಧಿಯಲ್ಲಿರುವ 1.17 ಕೋಟಿ ರೂ. ಕೊರೋನಾಕ್ಕೆ ಖರ್ಚು ಮಾಡುವಂತೆ ಡಿಸಿಗೆ ಸೋನಿಯಾಗಾಂಧಿ ಪತ್ರ

ದೇಶ(ನವದೆಹಲಿ)ಏ.24:-ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ಸಾರ್ವಜನಿಕರಿಗೆ ನೆಮ್ಮದಿ ನೀಡಲು ತಮ್ಮ ಸಂಸದರ ಕ್ಷೇತ್ರದಲ್ಲಿನ ತಮ್ಮ ಸಂಸದೀಯ ನಿಧಿಯನ್ನು ಖರ್ಚು ಮಾಡಬೇಕೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಎಂಪಿ ನಿಧಿಯಲ್ಲಿ 1.17 ಕೋಟಿ ರೂ. ಬಾಕಿ ಉಳಿದಿದೆ ಅದನ್ನು ಕೊರೋನಾ ಸಂಕಷ್ಟಕ್ಕೆ ಬಳಸಿಕೊಳ್ಳಿ ಎಂದು ಸೋನಿಯಾ ಗಾಂಧಿಯವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಕೊರೋನಾ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸಲು ಉಪಕರಣಗಳು ಮತ್ತು ಇತರ ಅವಶ್ಯಕತೆಗಳನ್ನು ಖರೀದಿಸುವ ನಿಯಮಗಳ ಪ್ರಕಾರ ಸಂಪೂರ್ಣ ಮೊತ್ತವನ್ನು ಖರ್ಚು ಮಾಡುವಂತೆ ಅವರು ಜಿಲ್ಲಾ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: