ಸುದ್ದಿ ಸಂಕ್ಷಿಪ್ತ

ಜೀವ ವಿಮಾ ವ್ಯವಹಾರದಲ್ಲಿ ವಿಜಯ್ ಪ್ರಸಾದ್ ಹೆಗ್ಡೆಗೆ ಪ್ರಥಮ ಸ್ಥಾನ

ಭಾರತೀಯ ಜೀವ ವಿಮಾ ನಿಗಮ, ಶಾಖೆ-4 ರ ಅಭಿವೃದ್ಧಿ ಅಧಿಕಾರಿ ವಿಜಯ್ ಪ್ರಸಾದ್ ಹೆಗ್ಡೆ ಅವರು ಕಳೆದ ವರ್ಷ 2016-17 ರಲ್ಲಿ 4.43 ಕೋಟಿ ರೂ.ಪ್ರಥಮ ಪ್ರೀಮಿಯಂನ್ನು ನಿಗಮಕ್ಕೆ ತಂದು ಕೊಟ್ಟು ಮೈಸೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ತಂಡದಲ್ಲಿ 170 ಪ್ರತಿನಿಧಿಗಳಿದ್ದು, ಪ್ರತಿನಿಧಿಗಳ ಸಂಖ್ಯಾ ಬಲದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾರ್ವಜನಿಕರಿಗೆ ಮತ್ತು ಪಾಲಿಸಿದಾರರಿಗೆ ಅತ್ಯುತ್ತಮ ಸೇವೆ ಸಲ್ಲಿಸಲು ಬಲ್ಲಾಳ್ ಸರ್ಕಲ್ ಹಾಗೂ ಜೆ.ಪಿ.ನಗರದ ಪೊಲೀಸ್ ಭೂತ್ ಹತ್ತಿರ ‘ಪ್ರೀಮಿಯಂ ಸಂಗ್ರಹಣಾ ಹಾಗೂ ಸಹಾಯ ಕೇಂದ್ರವನ್ನು ತೆರೆದಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ ಹಿರಿಯ ಶಾಖಾ ವ್ಯವಸ್ಥಾಪಕ ಚಂದ್ರ ಹಾಗೂ ಉಪಶಾಖಾ ವ್ಯವಸ್ಥಾಪಕ ಉಮಾಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

comments

Related Articles

error: