ಮೈಸೂರು

ಭಗವಾನ್ ಮಹಾವೀರರು ಅಹಿಂಸಾ ಮಾರ್ಗದ ಪ್ರತಿಪಾದಕರು  : ಕಾಂತಿಲಾಲ್ ಜೈನ್

ಮೈಸೂರು,ಏ.25:-   ಮೈಸೂರು ಜೈನ್ ಸಂಘಟನೆ ವತಿಯಿಂದ ದೇವರಾಜ ಮೊಹಲ್ಲಾದ ಡಿ ಸುಬ್ಬಯ್ಯ ರಸ್ತೆಯಲ್ಲಿರುವ ಜೈನ್ ಅಪಾರ್ಟ್ ಮೆಂಟ್ ಮುಂಭಾಗ
ಮಹಾವೀರ 1422ನೇ ಜಯಂತಿ ಯನ್ನು ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಅಸಹಾಯಕರಿಗೆ ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳನ್ನು ನೀಡಿ ಮಹಾವೀರ್ ಸ್ವಾಮೀಜಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಮೈಸೂರು ಜೈನ್ ಸಂಘಟನೆ ಮುಖಂಡರಾದ ಕಾಂತಿಲಾಲ್ ಜೈನ್ ಮಾತನಾಡಿ
ಭಗವಾನ್ ಮಹಾವೀರರು ಅಹಿಂಸಾ ಮಾರ್ಗದ ಪ್ರತಿಪಾದಕರು’. ರಾಜ ಮನೆತದಲ್ಲಿ ಜನನಿಸಿದ ಅವರು ಸಕಲ ಭೋಗ ಭಾಗ್ಯಗಳನ್ನು ತೊರೆದು, ದೀರ್ಘ ತಪಸ್ಸಿನ ಮೂಲಕ ಜ್ಞಾನದ ಬೆಳಕು ಕಂಡು ಕೊಂಡವರು , ಸಮಾಜದಲ್ಲಿನ ಮೂಢನಂಬಿಕೆ, ಪ್ರಾಣಿಬಲಿಯಂತಹ ದುಷ್ಟ ಆಚರಣೆಗಳನ್ನು ತೊಡೆದುಹಾಕಿ, ಅಹಿಂಸೆ ಮತ್ತು ಸಮಾನತೆಗಾಗಿ ನಿರಂತರ ಶ್ರಮಿಸಿದರು. ಜೈನಧರ್ಮದಲ್ಲಿ ಮಹಾವೀರ ಅವರನ್ನು 24ನೇ ತೀರ್ಥಂಕರರೆಂದು ಗೌರವಿಸಲಾಗಿದೆ. ಮಹಾವೀರರು ಜಗದ ಉದ್ಧಾರಕ್ಕಾಗಿ ರಾಜಭೋಗ ತೊರೆದು ಕಠಿಣ ತಪಸ್ಸುಮಾಡಿ, ಕೇವಲಜ್ಞಾನ ಸಂಪಾದಿಸಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದರು. ಜೈನ ಪರಂಪರೆಯ ಪ್ರಕಾರ ಮಹಾವೀರರು 24ನೇ ತೀರ್ಥಂಕರರು, ಜೈನರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.  ಧರ್ಮ, ಜಾತಿ ಭೇದ,ಭಾವವಿಲ್ಲದೆ ಎಲ್ಲರೂ ಒಂದಾಗಿ ಭಗವಾನ್ ಮಹಾವೀರರ ಜಯಂತಿ ಆಚರಿಸೋಣ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ನವೀನ್ ಕುಮಾರ್ ಮಾತನಾಡಿ
ಮಹಾವೀರ ಜಯಂತಿಯನ್ನು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ,ಕಷ್ಟದಲ್ಲಿರುವ ಸಂದರ್ಭದಲ್ಲಿ ಈ ರೀತಿ ಸಹಾಯ ಮಾಡುತ್ತಿರುವುದು ತ್ಯಾಗ ಬಲಿದಾನದ ಸಂಕೇತವಾಗಿರುವ ಮಹಾವೀರರ ಜಯಂತಿಗೆ ಅರ್ಥ ತಂದುಕೊಟ್ಟಿದೆ ,ಇದೇ ರೀತಿ ಉಳ್ಳವರು ಸಿರಿವಂತರು ಬಡವರ ಬಗ್ಗೆ ಕಾಳಜಿ ವಹಿಸಿ ಸಹಾಯ ಮಾಡಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ,ಜೈನ್ ಸಂಘಟನೆ ಯವತ್ತೂ ಸಹ ಈ ಬಡವರಿಗೆ ಸಹಾಯಹಸ್ತ ಚಾಚುವ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸಿಸಿದರು
ಮೈಸೂರು ಪ್ರಶಾಂತ್, ಜೈನ್ ಸಂಘಟನೆಯ ಸದಸ್ಯರುಗಳಾದ ಹನ್ಸ್ ರಾಜ್ ,ಶಾಂತಿಲಾಲ್ , ಕಾಂತಿಲಾಲ್ ,ಹೀರಾಚಂದ್ ಕಮಲೇಶ್ ,ರಮೇಶ್ , ಚಂದ್ರಾಬಾಯಿ,ರೇಖಾಬಾಯಿ ಮೂರ್ತಿದೇವಿ ,ಪರಮೇಶ್ ಗೌಡ ,ರಾಮಕೃಷ್ಣ ನಾಗರಾಜ್,ಮಹದೇವ್ ಪ್ರಸಾದ್ ,ನವೀನ್ ಹಾಗೂ ಪ್ರೀಮಿಯಂ ರೆಸಿಡೆನ್ಸಿ ನಿವಾಸಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: