ದೇಶಪ್ರಮುಖ ಸುದ್ದಿವಿದೇಶ

ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ :  ಯುಎಇ ಬುರ್ಜ್ ಖಲೀಫಾದಲ್ಲಿ ಕಾಣಿಸಿದ ತ್ರಿವಣ ಧ್ವಜ ; ‘ಸ್ಟೇ ಸ್ಟ್ರಾಂಗ್ ಇಂಡಿಯಾ’ ಸ್ಥೈರ್ಯ

ವಿದೇಶ(ದುಬೈ)ಏ.26:-  ವಿಶ್ವದೆಲ್ಲೆಡೆ ಕೊರೊನಾದ ಆರ್ಭಟ ಜೋರಾಗಿದೆ. ಅದರಲ್ಲಿಯೂ ಭಾರತದಲ್ಲಿ ಹಿಂದೆಂದಿಗಿಂತಲೂ ಕಾಣದಷ್ಟು ಭಯಾನಕವಾಗಿ ಕೊರೋನಾ ಕಾಡುತ್ತಿದೆ.

ಕೊರೋನಾ ಮಾರಕ ವೈರಸ್ ನ ಎರಡನೇ ಅಲೆಯು ಭಾರತದಲ್ಲಿ ಹಾನಿಯನ್ನುಂಟುಮಾಡುತ್ತಿದೆ. ಕೊರೋನಾದ ಹೊಸ ಪ್ರಕರಣಗಳು ದಾಖಲೆಗಳನ್ನು ಮುರಿಯುತ್ತಿವೆ. ಪ್ರತಿದಿನ ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಭಾರತದ ಹಲವಾರು ನೆರೆಯ ರಾಷ್ಟ್ರಗಳು ಸಹಾಯ ಹಸ್ತ ಚಾಚಿದೆ. ಏತನ್ಮಧ್ಯೆ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದಲ್ಲಿ  ಭಾರತದ ತ್ರಿವರ್ಣ ಧ್ವಜದೊಂದಿಗೆ ‘ಸ್ಟೇ ಸ್ಟ್ರಾಂಗ್ ಇಂಡಿಯಾ’ ಎಂದು  ಬರೆಯುವ ಮೂಲಕ ಸ್ಥೈರ್ಯ ತುಂಬಲಾಗಿದೆ.

ಭಾರತವು ಕೊರೋನಾ ವೈರಸ್ ವಿರುದ್ಧ ತೀವ್ರ ಯುದ್ಧವನ್ನು ನಡೆಸುತ್ತಿದೆ, ಈ ಸಮಯದಲ್ಲಿ ಯುಎಇ ತನ್ನ ಸ್ನೇಹಿತ ಭಾರತಕ್ಕೆ   ಶುಭಾಶಯಗಳನ್ನು ಕಳುಹಿಸುತ್ತಿದೆ” ಎಂದು ಯುಎಇಯ ಭಾರತದ ರಾಯಭಾರ ಕಚೇರಿ ಟ್ವೀಟರ್ ನಲ್ಲಿ ಬರೆದಿದೆ.

ರಿಯಾದ್ ಮೂಲದ ಇಂಡಿಯನ್ ಮಿಷನ್, “ಅಗತ್ಯವಿರುವ 80 ಮೆಟ್ರಿಕ್ ಟನ್  ಆಮ್ಲಜನಕವನ್ನು ಕಳುಹಿಸುವ ವಿಷಯದಲ್ಲಿ ಅದಾನಿ ಗ್ರೂಪ್ ಮತ್ತು ಎಂ / ಎಸ್ ಲಿಂಡೆ ಜೊತೆ ಪಾಲುದಾರಿಕೆ ಹೊಂದಲು ಭಾರತೀಯ ರಾಯಭಾರ ಕಚೇರಿ ಹೆಮ್ಮೆಪಡುತ್ತದೆ” ಎಂದು ಟ್ವೀಟ್ ಮಾಡಿದೆ. ಎಲ್ಲಾ ಸಹಾಯ, ಬೆಂಬಲ ಮತ್ತು ಸಹಕಾರಕ್ಕಾಗಿ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯಕ್ಕೆ ನಾವು ಪ್ರಾಮಾಣಿಕವಾಗಿ  ಧನ್ಯವಾದ ಅರ್ಪಿಸುವುದಾಗಿ ತಿಳಿಸಿದೆ.

ಈ ಸ್ಥೈರ್ಯಕ್ಕೆ ಕೃತಜ್ಞತೆ ಸಲ್ಲಿಸಿರುವ ಯುಎಇಯಲ್ಲಿನ ಭಾರತೀಯ ರಾಯಭಾರಿ ಪವನ್ ಕಪೂರ್ ಇಂಥ ಕಷ್ಟದ ಸಮಯದಲ್ಲಿ ಯುಎಇ ತನ್ನ ಬೆಂಬಲ ವ್ಯಕ್ತಪಡಿಸಿರುವುದನ್ನು ಭಾರತ ಪ್ರಶಂಸಿಸುತ್ತದೆ ಎಂದಿದ್ದಾರೆ.     (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: