ದೇಶಪ್ರಮುಖ ಸುದ್ದಿ

    ತಿಹಾರ್ ಜೈಲಿನಲ್ಲಿರುವ ಖೈದಿ  ಉಮರ್ ಖಾಲಿದ್ ಗೆ ಕೊರೋನಾ ಸೋಂಕು :     ಐಸೊಲೇಷನ್ ವಾರ್ಡ್‌ ಗೆ ಶಿಫ್ಟ್ 

ದೇಶ(ನವದೆಹಲಿ)ಏ.26:-   ಕಳೆದ ವರ್ಷ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಜೆಎನ್‌ ಯು ಹಳೆಯ ವಿದ್ಯಾರ್ಥಿ ಉಮರ್ ಖಾಲಿದ್ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು, ತಿಹಾರ್ ಜೈಲಿನ ಆವರಣದಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ.

ಅಧಿಕಾರಿಗಳು ಭಾನುವಾರ ಈ ಮಾಹಿತಿಯನ್ನು ನೀಡಿದ್ದಾರೆ. ರೋಗದ ಲಕ್ಷಣಗಳು ಕಾಣಿಸಿಕೊಂಡ ನಂತರ ಉಮರ್ ಖಾಲಿದ್ ಅವರನ್ನು ಪರೀಕ್ಷೆಗೊಳಪಡಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ನಡೆದ ಪರೀಕ್ಷೆಯ  ಫಲಿತಾಂಶದಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ. ಉಮರ್ ಖಾಲಿದ್ ನನ್ನು ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್, ಎಸ್.ಎಚ್)

Leave a Reply

comments

Related Articles

error: