ಮೈಸೂರು

ಛಾಯಾಗ್ರಾಹಕರ ಕಷ್ಟಕ್ಕೆ ಸ್ಪಂದಿಸಲು ಮನವಿ

ಮೈಸೂರು,ಏ.26:-   ಸರ್ಕಾರ ರಾಜ್ಯಾದ್ಯಂತ  ಕರ್ಪ್ಯೂ, ವೀಕ್ ಎಂಡ್ ಕರ್ಫ್ಯೂ ಹೇರಿದ್ದು ಬಾರ್ ಮತ್ತು ಬ್ಯೂಟಿ ಪಾರ್ಲರ್ ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ . ಆದರೆ ಶುಭ ಸಮಾರಂಭ, ಮದುವೆ ವೇದಿಕೆ ಕಾರ್ಯಕ್ರಮಗಳಿಗೆ ದೂರದಿಂದಲೇ ಸೇವೆ ನೀಡುವ ಫೋಟೋಗ್ರಾಫರ್ಸ್ ಮತ್ತು  ವಿಡಿಯೋಗ್ರಾಫರ್ಸ್ ನೆಲೆಯಾಗಿರುವ ಸ್ಟುಡಿಯೋಗಳನ್ನು ಬಂದ್ ಮಾಡಿಸಿರುವುದರಿಂದ ತುಂಬಾ ನಷ್ಟವಾಗಿದೆ ಎಂದು ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫ್  ಅಸೋಸಿಯೇಶನ್ ನಿರ್ದೇಶಕರಾದ ಪ್ರಮೋದ್ ಗೌಡ ಅಳಲು ತೋಡಿಕೊಂಡಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು  ಕಳೆದ ವರ್ಷವು ಸಹ ಈ ಮಹಾಮಾರಿ ಕೊರೋನಾ ದಿಂದಾಗಿ ಮಾಡಲು ಕೆಲಸವಿಲ್ಲದೆ  ಬಹಳಷ್ಟು ಸಾಲ ಮಾಡಿಕೊಂಡು ಬಹಳ ಸಂಕಷ್ಟದಲ್ಲಿದ್ದಾರೆ. ಪ್ರತಿಯೊಂದು ಕಾರ್ಯಕ್ರಮಗಳಿಗೂ ಫೋಟೋ ವಿಡಿಯೋ ಗ್ರಾಫರ್ ಗಳು ಬೇಕು. ಅದು ಸಾಕ್ಷಿಯಾಗುತ್ತದೆ .ಕಳೆದ ವರ್ಷವೂ ಸಹ ಯಾವುದೇ ಮದುವೆ, ಶುಭ ಸಮಾರಂಭಗಳು ನಡೆಯದೇ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಬಹಳ ನೊಂದಿದ್ದೇವೆ. ಈ ವರ್ಷದ ಈ ಸೀಸನ್ ನಂಬಿದ ವೃತ್ತಿ ಬಾಂಧವರ ಕುಟುಂಬಗಳು ಬೀದಿಗೆ ಬರಬೇಕಾದ ಪರಿಸ್ಥಿತಿ ಬಂದಿದೆ.

ವೃತ್ತಿ ಬಾಂಧವರು ತಮ್ಮ ಕುಟುಂಬ ನಿರ್ವಹಣೆಗಾಗಿ ಸ್ಟುಡಿಯೋ ಪ್ರಿಂಟಿಂಗ್  ಲ್ಯಾಬ್ ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರ,. ಜಿಲ್ಲಾಡಳಿತಕ್ಕೆ ನಗರ ಮತ್ತು ಜಿಲ್ಲೆಯ ವೃತ್ತಿ ಬಾಂಧವರ ಪರವಾಗಿ   ಮನವಿ ಮಾಡಿದ್ದಾರೆ .

ಈ ಕೂಡಲೇ ಛಾಯಾಗ್ರಾಹಕರಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು  ಅವರು ಕೇಳಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: