ಮೈಸೂರು

ಕೋವಿಡ್ ಗೆ ತುತ್ತಾಗಿದ್ದ ಮಹಿಳೆ ಆಕ್ಸಿಜನ್ ಕೊರತೆಯಿಂದ ಸಾವು

ಮೈಸೂರು,ಏ.26:-  ಕೋವಿಡ್ ಗೆ ತುತ್ತಾಗಿದ್ದ ಮಹಿಳೆಯೊಬ್ಬರು  ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಪಿರಿಯಾಪಟ್ಟಣ ತಾಲೂಕಿನ ವಿಶಾಲಾಕ್ಷಮ್ಮ(58) ಎಂದು ಹೇಳಲಾಗಿದೆ.  ಇವರು ಕಳೆದ ಏಪ್ರಿಲ್ 20 ರಂದು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಗ ಬೇಧಿ ನಿಲ್ಲದೆ ಕಾರಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿದ್ದ ಕಾರಣ ಮತ್ತೆ ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡುತ್ತಿರುವಾಗ ಮಹಿಳೆ ಸಾವನ್ನಪ್ಪಿದ್ದಾರೆ.  ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಮೃತರ ಕುಟುಂಬದವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮೊದಲು ಆಸ್ಪತ್ರೆಯವರೇ  ಶವ ಸಂಸ್ಕಾರವನ್ನು ನಡೆಸುವುದಾಗಿ ತಿಳಿಸಿ ಈಗ ಶವವನ್ನು ಕುಟುಂಬದವರೇ  ಕೊಂಡೊಯ್ಯುವಂತೆ ಸೂಚನೆ ನೀಡಿದ್ದಾರೆ. ಆದರೆ ಕುಟುಂಬದವರು ಇಲಾಖೆಯವರೇ ಶವ ಸಂಸ್ಕಾರ ನಡೆಸಿಕೊಡಬೇಕು ಎಂದು ಪಟ್ಟು ಹಿಡಿದು ತಾಲೂಕು ಆರೋಗ್ಯಾಧಿಕಾರಿ ಹಾಗೂ ತಹಶೀಲ್ದಾರ್ ಅವರ ಆಗಮನಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: